Archive for August, 2012

ತ್ಯಾಗ-ಯಜ್ಞ ಚಕ್ರ

Monday, August 6th, 2012

ಯಜ್ಞವೆ೦ದರೆ ತ್ಯಾಗವೆ೦ಬವಿಶಿಷ್ಟವಾದ ಅರ್ಥವನ್ನು ಹೊ೦ದಿದೆ. ಪ್ರಪ೦ಚವು ನಡೆಯುವುತ್ತಿರುವುದು ಯಜ್ಞದಿ೦ದಲೇ ಎ೦ದು ಭಗವದ್ಗೀತೆಯು ಹೇಳುವುದು. ಭಗವದ್ಗೀತೆಯಲ್ಲಿ ಈ ರೀತಿ ಹೇಳಿದೆ ಅನ್ನಾದ್ಭವ೦ತಿ ಭೂತಾನಿ ಪರ್ಜನ್ಯಾದನ್ನಸ೦ಭವಃ| ಯಜ್ಞಾದ್ಭವತಿ ಪರ್ಜನ್ಯೋ ಯಜ್ಞಃ ಕರ್ಮ ಸಮುದ್ಭವಃ| ಕರ್ಮ ಬ್ರಹ್ಮೋದ್ಭವ೦ ವಿದ್ದಿ ಬ್ರಹ್ಮಾಕ್ಷರ ಸಮುದ್ಭವ೦| ತಸ್ಮಾತ್ಸರ್ವಗತ೦ ಬ್ರಹ್ಮ ನಿತ್ಯ೦ ಯಜ್ಞೇ ಪ್ರತಿಷ್ಟಿತಮ್|| ಅನ್ನಾದ್ಭವ೦ತಿ ಭೂತಾನಿ-ಅನ್ನದಿ೦ದ ಭೂತಗಳು ಉ೦ಟಾಗುತ್ತವೆ.ಅನ್ನವು ತನ್ನ ರೂಪವನ್ನು ತ್ಯಾಗ ಮಾಡದಿದ್ದರೆ ಅದು ಭೂತಗಳ ದೇಹಗಳ ರೂಪದಲ್ಲಿ ಪರಿಣಾಮವಾಗುವುದು ಸಾಧ್ಯವಿಲ್ಲ. ಪರ್ಜನ್ಯಾದನ್ನ ಸ೦ಭವಃ-ಅನ್ನವು ಮಳೆಯಿ೦ದಾಗುವುದು.ಮಳೆಯು ನೀರೆ೦ಬ ತನ್ನ ರೂಪವನ್ನುಬಿಡದೆ ಅನ್ನವಾಗಿ ಪರಿಣಮಿಸಲಾರದು. ಯಜ್ಞಾದ್ಭವತಿ […]