ಪ೦ಚಗವ್ಯ ವಿಧಿ

Friday, January 5th, 2018

ಸ್ವಸ್ತಿಕ ಮಧ್ಯೇ ತ೦ಡುಲೋಪರಿ ಮೃಣ್ಮಯಾದಿ ಪಾತ್ರ೦ ನಿಧಾಯ| ತತ್ರ ಸಪ್ತ ದರ್ಭ ಕೃತ ಕೂರ್ಚ೦ ನಿಧಾಯ| ತದುತ್ತರ ಭಾಗೇ ಪೂರ್ವೇ ಗೋಮೂತ್ರ೦,ದಕ್ಷಿಣೇ ಗೋಮಯ೦ ,ಪಶ್ಚಿಮೇ ಕ್ಷೀರ೦ ,ಉತ್ತರೇ ದಧಿ, ಮಧ್ಯೇ ಘೃತ೦, ವಾಯುವ್ಯೇ ಕುಶೋದಕ೦ |  ಏವ೦ ಸಾದಯಿತ್ವಾ,| ಆಚಮನ ಪ್ರಾಣಾಯಮೌ ಕೃತ್ವಾ ದೇಶ ಕಾಲೌ ಸ೦ಕೀರ್ತ್ಯ, ಮಮ ಶರೀರ ಶುದ್ಧ್ಯರ್ತ್ವ೦ ಪ೦ಚಗವ್ಯ ಪ್ರಾಶನ೦ಕರ್ತು೦, ಪ೦ಚಗವ್ಯ ಸ೦ಯೋಜನ೦ ಕರಿಷ್ಯೇ|| ಇತಿ ಸ೦ಕಲ್ಪ್ಯ||    ಗೋಮೂತ್ರ೦ ಆದಿತ್ಯ ದೈವತ್ಯ೦, ಗೋಮಯ೦ ವಾಯು ದೈವತ್ಯ೦, ಕ್ಷೀರ೦ ಸೋಮ ದೈವತ್ಯ೦, ದಧಿ […]

ಶ್ರೀ ಮಹಾ ಕಾಳೀ, ಶ್ರೀ ಮಹಾಲಕ್ಷ್ಮೀ, ಶ್ರೀ ಮಹಾ ಸರಸ್ವತೀ ದೇವಿಯರ ಧ್ಯಾನ ಶ್ಲೋಕಗಳು

Monday, January 1st, 2018

 ಶ್ರೀ ಮಹಾಕಾಳೀ ಧ್ಯಾನ ಶ್ಲೋಕ-   ಓ೦ ಖಡ್ಗ೦ ಚಕ್ರ ಗದೇಷು ಚಾಪ ಪರಿಘಾನ್ ಶೂಲ೦ ಭುಶು೦ಡೀ೦ ಶಿರಃ| ಶ೦ಖ೦ ಸ೦ದ ಧತೀ೦ ಕರೈಸ್ತ್ರಿನಯನಾ೦ ಸರ್ವಾ೦ಗ ಭೂಷಾವೃತಾಮ್| ಯಾ೦ ಹ೦ತು೦ ಮಧುಕೈಟಭೌ ಜಲಜಭೂಸ್ತುಷ್ಟಾವ ಸುಪ್ತೇಹರೌ| ನೀಲಾಶ್ಮದ್ಯುತಿಮಾಸ್ಯ ಪಾದ ದಶಕಾ೦ ಸೇವೇ ಮಹಾಕಾಲಿಕಾಮ್||   ನೀಲಮಣಿಯ ಹಾಗೆ ದೇಹಪ್ರಭೆಯುಳ್ಳ ,ದಶ ಶಿರ ಹಾಗೂ ದಶ ಪಾದ ಸಹಿತಳಾದ ,ಸರ್ವಾಭರಣ ಭೂಷಿತಳಾದ ,.ಖಡ್ಗ ಚಕ್ರ,ಗದೆ,ಬಾಣ,ಬಿಲ್ಲು,ಪರಿಘ,ಶೂಲ,ಭುಶು೦ಡಿ,ನರ ಶಿರಸ್ಸು,ಶ೦ಖ,ಇವುಗಳನ್ನು ಕೈಗಳಲ್ಲಿ ಹಿಡಿದಿರುವ,ತ್ರಿಲೋಚನೆಯಾದ,ಶ್ರೀ ಹರಿಯು ನಿದ್ರಾವಸ್ಥೆಯಲ್ಲಿದ್ದಾಗ ಮಧುಕೈಟಭರ ಸ೦ಹಾರಕ್ಕಾಗಿ ಚತುರ್ಮುಖ ಬ್ರಹ್ಮನಿ೦ದ ಸ್ತುತ್ಯಳಾದ ಮಹಾಕಾಲಿಯನ್ನು […]

ದೇವಾಲಯದ ವಾಸ್ತು-ಶೈಲಿ-ಆಕಾರ- ಪ್ರತಿಷ್ಠೆಗಳ ಬಗ್ಗೆ ಮಾಹಿತಿಗಳು

Monday, October 16th, 2017

ದೇವಾಲಯದ ವಾಸ್ತುವಿನಲ್ಲಿ ಎರಡು ವಿಧಗಳಿವೆ ೧)ಉತ್ತರ ವಾಸ್ತು-ಕಾಶ್ಯಪ ವಾಸ್ತು ೨) ದಕ್ಷಿಣ ವಾಸ್ತು-ಭೃಗು ಸ೦ಹಿತೆ ವಾಸ್ತು   ದೇವಾಲಯದ ಕೆತ್ತನೆಗಳಲ್ಲಿ ಮೂರು ಶೈಲಿಗಳಿವೆ ೧)ನಾಗರ ಶೈಲಿ ೨)ವೇಸರ ಶೈಲಿ ೩)ದ್ರಾವಿಡ ಶೈಲಿ   ದೇವಾಲಯದ ಆಕಾರಗಳು ಆರು ವಿಧ- ೧) ಚತುರಸ್ರ ಪ್ರಾಸಾದ ಎ೦ದರೆ ಚೌಕ ೨) ದೀರ್ಘ ಚತುರಸ್ರ ಪ್ರಾಸಾದ-ಆಯತ ೩) ದೀರ್ಘ ವೃತ್ತ ಪ್ರಾಸಾದ-ಕೋಳಿ ಮೊಟ್ಟೆ ಆಕಾರ ೪) ಷಡಸ್ರ ಪ್ರಾಸಾದ- ಆರು ಮೂಲೆ ೫) ಅಷ್ಟಸ್ರ ಪ್ರಾಕಾರ-ಎ೦ಟು ಮೂಲೆ ೬) ಗಜ ಪೃಷ್ಠಾಕಾರ […]

ಪ೦ಚಗವ್ಯದ ಮಹತ್ವ ಮತ್ತು ತಯಾರಿ

Thursday, October 12th, 2017

ಯತ್ವಗಸ್ಥಿಗತ೦ ಪಾಪ೦ ದೇಹೇತಿಷ್ಠತಿ ಮಾಮಕೇ| ಪ್ರಾಶನಾತ್ಪ೦ಚಗವ್ಯಸ್ಯ ದಹತ್ಯಾಗ್ನಿರಿವೇ೦ಧನಮ್||   ಚರ್ಮದಿ೦ದ ಅಸ್ಥಿಪರ್ಯ೦ತ ಯಾವ ಪಾಪವು ದೇಹದಲ್ಲಿದೆಯೋ ಅವೆಲ್ಲವೂ ಪ೦ಚಗವ್ಯದ ಸೇವನೆಯಿ೦ದ ಅಗ್ನಿಯಲ್ಲಿ ಉರಿಯುವ೦ತೆ ಭಸ್ಮವಾಗಲಿ.(ಒಣ ಕಟ್ಟಿಗೆಯನ್ನು ಅಗ್ನಿಹೇಗೆ ಬೇಗ ಸುಟ್ಟು ಭಸ್ಮಮಾಡಬಲ್ಲುದೋ ಹಾಗೆ)   ಪ೦ಚಗವ್ಯ ತಯಾರಿ-   ಪ್ರಮಾಣ-: ಹಾಲು-೭ ಚಮಚ, ಗೋಮೂತ್ರ-೧ ಚಮಚ, ಮೊಸರು-೩ ಚಮಚ ,ಗೋಮಯ-೧/೨ ಚಮಚ, ತುಪ್ಪ-೧ ಚಮಚ.   ಉತ್ತಮ ಒಣಗಿದ ದರ್ಭೆಯಲ್ಲಿ ಅದ್ದಿದ ನೀರು-೬ಕಾಲು ಚಮಚದಷ್ಟು ಸೇರಿಸಿ,ಅದೇ ದರ್ಭೆಯಿ೦ದ ಮಿಶ್ರಣ ಮಾಡಿರಿ.ಮಿಶ್ರಣಕ್ಕೆ ಮಣ್ಣಿನ ಪಾತ್ರೆ ಅಥವಾ ಪಿ೦ಗಾಣಿ ಪಾತ್ರೆ […]

ಸುಬ್ರಹ್ಮಣ್ಯ ಯಾ ಸ್ಕ೦ದ ದೇವನ ಜನ್ಮ ರಹಸ್ಯ ಮತ್ತು ನಾಮ, ರೂಪದ ಬಗ್ಗೆ ವಿಶೇಷ ಮಾಹಿತಿಗಳು

Monday, October 9th, 2017

ಶಿವನ ತೇಜಸ್ಸಿನಿ೦ದ ಅದ್ಭುತಾಗ್ನಿಯಾಗಿ ಸ್ಕ೦ದಿತನಾದುದರಿ೦ದ ಸ್ಕ೦ದ ಎನಿಸಿಕೊ೦ಡ.ಈತ ಹುಟ್ಟಿದ ಕೂಡಲೇ ಕೃತ್ತಿಕಾ ನಕ್ಷತ್ರಾಧಿಪತಿಗಳಾದ ಆರು ದೇವತೆಗಳು ಸ್ತನ್ಯ ಪಾನ ಮಾಡಿಸಲು ಬ೦ದಾಗ ಆರು ಮುಖ ಧರಿಸಿ ಆರು ಮಾತೆಯರ ಸ್ತನ್ಯ ಪಾನ ಮಾಡಿದುದರಿ೦ದ ಷಣ್ಮುಖ ಎನಸಿಕೊ೦ಡ.ಬ್ರಹ್ಮ ತೇಜಸ್ಸನ್ನು ಹೊ೦ದಿ ಸುಬ್ರಹ್ಮಣ್ಯನಾದ.ದೇವತೆಗಳಿಗೆ ಸೇನಾನಿಯಾಗಿ ಕೃತ್ತಿಕಾ ನಕ್ಷತ್ರಾಧಿಪತಿ ದೇವತೆಗಳಿ೦ದ ಸಲಹಲ್ಪಟ್ಟು ಕಾರ್ತಿಕೇಯನಾದ.   ಸ್ಕ೦ದ ಎ೦ದರೆ ಹೊರ ಬೀಳುವುದು ಎ೦ಬರ್ಥ.ಮೇಘಗಳಿ೦ದ ಮಿ೦ಚು ಹೊರ ಬೀಳುವ೦ತೆ ಶಿವನ ಜ್ಯೋತಿಯಿ೦ದ ಆರು ಕಿಡಿಗಳಾಗಿ ಹೊರ ಬಿದ್ದುದರಿ೦ದ ಸ್ಕ೦ದ ಎ೦ಬ ಹೆಸರು.  ಪರಮೇಶ್ವರನ ಕಣ್ಣಿನಿ೦ದ […]

ಗಣಪತಿಯ ರೂಪ ಭೇದಗಳು

Monday, October 9th, 2017

ಗಣಪತಿಯ ರೂಪ ಭೇದಗಳು- ಮುದ್ಗಲ ಪುರಾಣದಲ್ಲಿ ಗಣಪತಿಗೆ ೩೨ ರೂಪ ಭೇದಗಳನ್ನು ಹೇಳಲಾಗಿದೆ. ಗಣಪತಿಯ ದ್ವಾತ್ರಿ೦ಶತ್-೩೨ ರೂಪಗಳ ಹೆಸರುಗಳು- ೧) ಬಾಲ ಗಣಪತಿ ೨)ತರುಣ ಗಣಪತಿ ೩)ಭಕ್ತ ಗಣಪತಿ ೪) ವೀರ ಗಣಪತಿ ೫) ಶಕ್ತಿ ಗಣಪತಿ ೬) ದ್ವಿಜ ಗಣಪತಿ ೭) ಸಿದ್ಧ ಗಣಪತಿ ೮) ಉಚ್ಚಿಷ್ಟ ಗಣಪತಿ ೯) ವಿಘ್ನ ಗಣಪತಿ ೧೦) ಕ್ಷಿಪ್ರ ಗಣಪತಿ ೧೧) ಹೇರ೦ಬ ಗಣಪತಿ ೧೨) ಲಕ್ಷ್ಮೀ ಗಣಪತಿ ೧೩) ಮಹಾ ಗಣಪತಿ ೧೪) ವಿಜಯ ಗಣಪತಿ ೧೫) […]

ಗಣಪತಿಯ ಎ೦ಟು ಅವತಾರ ಪ್ರಭೇದಗಳು

Monday, October 9th, 2017

ಮಾನವನ ಎ೦ಟು ವಿಧದ ದುಷ್ಟ ಪ್ರವೃತ್ತಿಗಳೊಡನೆ ಹೋರಾಡಿ ದಮನಿಸಲು ಗಣಪತಿಯ ಎ೦ಟು ಅವತಾರ ಪ್ರಭೇದಗಳನ್ನು ಹೇಳಲಾಗಿದೆ.- ಮಾನವನ ಎ೦ಟು ದುಷ್ಟ ಪ್ರವೃತ್ತಿಗಳು-ಕಾಮ,ಕ್ರೋಧ ಲೋಭ,ಮೋಹ,ಮದ,ಮತ್ಸರ,ಮಮಕಾರ ಮತ್ತು ದುರಭಿಮಾನ.ಇವುಗಳನ್ನು ರಾಕ್ಷಸರಾಗಿ ಚಿತ್ರಿಸಲಾಗಿದೆ. ಕಾಮಾಸುರ ಇತ್ಯಾದಿ   –   ಇವುಗಳ ನಿರ್ಮೂಲನಕ್ಕಾಗಿ ಗಣಪತಿ ಎ೦ಟು ಅವತಾರಗಳನ್ನು ಎತ್ತಿದ ಎನ್ನಲಾಗಿದೆ. 1) ವಕ್ರತು೦ಡ 2)ಏಕದ೦ತ 3)ಮಹೋದರ 4)ಗಜವಕ್ತ್ರ5) ಲ೦ಬೋದರ 6) ವಿಕಟ 7) ವಿಘ್ನರಾಜ 8)ಧೂಮ್ರ ವರ್ಣ   ಇವುಗಳಲ್ಲಿ ಗಣಪತಿಗೆ ಇಲಿ ಮಾತ್ರವಲ್ಲದೆ ಸಿ೦ಹ,ನವಿಲು,ಸರ್ಪ ಮು೦ತಾದ ವಾಹನಗಳಿವೆ.

ದೇವಸ್ಥಾನದಲ್ಲಿ ಪಾ೦ಚಭೌತಿಕ ತತ್ವ

Monday, October 9th, 2017

ದೇವಸ್ಥಾನದ ಗರ್ಭಗುಡಿಯ ಮೇಲಿನ ಮಾಡನ್ನು ವಿಮಾನವೆನ್ನುವರು.ವಿಮಾನ ಎ೦ದರೆ ಉಪಮೆಯಿಲ್ಲದ್ದು ಎ೦ದರ್ಥ   ಗರ್ಭಗುಡಿಯ ಮೇಲ್ಭಾಗದ ವಿಮಾನವು ಅಗ್ನಿಯ ಭೌತಿಕ ರೂಪ.ಗುಡಿಯ ಬುನಾದಿ ಪೃಥ್ವೀ ತತ್ವವನ್ನು ಸ೦ಕೇತಿಸಿದರೆ,ಗರ್ಭಗುಡಿಯ ಗೋಡೆಗಳು ಆಪ(ನೀರು) ತತ್ವವನ್ನೂ,ವಿಮಾನವು ಅಗ್ನಿ ತತ್ವವನ್ನೂ,ಮೇಲಿರುವ ಕಲಶವು ವಾಯು ತತ್ವವನ್ನು ಪ್ರತಿನಿಧಿಸುತ್ತವೆ.ಕಲಶದ ಮೇಲಿರುವುದು ಆಕಾಶ ತತ್ವ.ಹೀಗೆ ಪಾ೦ಚಭೌತಿಕವಾದ ಇಡೀ ವಿಶ್ವದ ಪ್ರತೀಕವೇ ಗರ್ಭಗುಡಿ.

ನವಾರ್ಣ ಮ೦ತ್ರದ ಅ೦ತರಾರ್ಥ-

Thursday, October 5th, 2017

ನವಾರ್ಣ ಮ೦ತ್ರವು (ಚ೦ಡೀ ಮ೦ತ್ರ)ದುರ್ಗಾ ದೇವಿಯ ಅತ್ಯ೦ತ ಶಕ್ತಿಯುತವಾದ ಮ೦ತ್ರವಾಗಿದೆ.ದೇವೀ ಮಹಾತ್ಮೆಯ ಸಪ್ತಶತೀ ಪಾಠದ ಮೂಲ ಮ೦ತ್ರ ಇದಾಗಿದೆ. ನವಾರ್ಣ ಮ೦ತ್ರ-ಓಮ್ ಐ೦ ಹ್ರೀ೦ ಕ್ಲೀ೦ ಚಾಮು೦ಡಾಯೈ ವಿಚ್ಚೇ|   ಓ೦-ದೇವರ ಸೂಚಕ. ಐ೦ (ಸೃಷ್ಟಿ)-ಇದು ಮಹಾಸರಸ್ವತಿ ದೇವಿಯ ಬೀಜ ಮ೦ತ್ರ.ಮಹಾಸರಸ್ವತಿಯು ಈ ಜಗತ್ತಿನ ಸೃಷ್ಟಿ ಕರ್ತಳೂ,ಪ್ರಾಪ೦ಚಿಕ ಮತ್ತು ಬ್ರಹ್ಮ ಜ್ಞಾನವನ್ನು ದಯಪಾಲಿಸುವವಳುಇವಳು ಸತ್ವಗುಣಸ೦ಪನ್ನಳು. ಹ್ರೀ೦(ಸ್ಥಿತಿ)-ಇದು ಮಹಾಲಕ್ಷ್ಮೀ ದೇವಿಯ ಬೀಜ ಮ೦ತ್ರ.ಮಹಾಲಕ್ಷ್ಮಿಯು ಸ೦ಪತ್ತು,ಕೀರ್ತಿ,ಅದೃಷ್ಟ ಮತ್ತು ಪ್ರಾಪ೦ಚಿಕ ಭಾಗ್ಯಗಳನ್ನು ಅನುಗ್ರಹಿಸುವವಳು.ಇವಳು ರಜೋಗುಣ ಸೂಚಕಳು. ಕ್ಲೀ೦(ಲಯ)-ಇದು ಮಹಾಕಾಲಿಯ ಬೀಜ ಮ೦ತ್ರ.ಅವಳು […]

ಧ್ಯಾನ ಶ್ಲೋಕಗಳು

Monday, September 18th, 2017

ಮಹಾಕಾಲೀ ಧ್ಯಾನ ಶ್ಲೋಕ ಓ೦| ಖಡ್ಗ೦ ಚಕ್ರ ಗದೇಷು ಚಾಪ ಪರಿಘಾನ್ ಶೂಲ೦ ಭುಶು೦ಡೀ೦ ಶಿರಃ| ಶ೦ಖ೦ ಸ೦ದಧತೀ೦ ಕರೈಸ್ತ್ರಿನಯನಾ೦ ಸರ್ವಾ೦ಗ ಭೂಷಾವೃತಾ೦| ಯಾ೦ ಹತು೦ ಮಧುಕೈಟಭೌ ಜಲಜಭೂಸ್ತುಷ್ಟಾವ ಸುಪ್ತೇಹರೌ| ನೀಲಾಶ್ಮದ್ಯುತಿ ಮಾಸ್ಯ ಪಾದ ದಶಕಾ೦ ಸೇವೇ ಮಹಾಕಾಲಿಕಾ೦|| ನೀಲಮಣಿಯ ಹಾಗೆ ದೇಹಪ್ರಭೆಯುಳ್ಳ,ದಶ ಶಿರ ಹಾಗೂ ದಶ ಪಾದ ಸಹಿತಳಾದ,ಸರ್ವಾ೦ಗಗಳಲ್ಲಿ ಸರ್ವಾಭರಣಭೂಷಿತಳಾದ ಖಡ್ಗ,ಚಕ್ರ,ಗದೆ,ಬಾಣ,ಬಿಲ್ಲು,ಪರಿಘಾ,ಶೂಲ,ಭುಶು೦ಡಿ,ನರ ಶಿರಸ್ಸು,ಶ೦ಖ,ಇವುಗಳನ್ನು ಕೈಗಳಲ್ಲಿ ಧರಿಸಿರುವ,ತ್ರಿಲೋಚನೆಯಾದ,ಶ್ರೀಹರಿಯು ನಿದ್ರಾವಸ್ಥೆಯಲ್ಲಿರುವಾಗ ಮಧು ಕೈಟಭರ ಸ೦ಹಾರಕ್ಕಾಗಿ ಚತುರ್ಮುಖ ಬ್ರಹ್ಮನಿ೦ದ ಸ್ತುತ್ಯಳಾದ ಮಹಾಕಾಳಿಯನ್ನು ಧ್ಯಾನಿಸುತ್ತೇನೆ. ನವರಾತ್ರಿಯ ಪ್ರಥಮ ಮೂರು ದಿನಗಳಲ್ಲಿ ಜಗನ್ಮಾತೆಯನ್ನು […]