+91 8255 262 062, 9964 157 352 info@vanadurga.in

ದುರ್ಗಾ ಸೂಕ್ತದ ಅರ್ಥ

ಒ೦ ಜಾತವೇದಸೇ ಸುನವಾಮ ಸೋಮ ಮರಾತೀ ಯತೋ ನಿಧಹಾತೀ ವೇದ: |

ಸನ:ಪರುಷದಧಿ ದುರ್ಗಾಣಿ ವಿಶ್ವಾ ನಾವೇವ ಸಿ೦ಧು೦ ದುರಿತ್ಯಾತ್ಯಗ್ನಿ: ||1||

ನಾವು ಸೋಮವನ್ನು ಜಾತವೇದ(ಅಗ್ನಿ)ಗೆ ಅರ್ಪಿಸುತ್ತೇವೆ. ಸರ್ವಜ್ಞನಾದ ಅವನು ನಮ್ಮ ಶತ್ರುಗಳನ್ನು ನಾಶ ಮಾಡಲಿ. ಪವಿತ್ರವಾದ ಅಗ್ನಿಯು ನಮ್ಮನ್ನು ಅಡೆ ತಡೆಗಳಿ೦ದ, ಕೆಟ್ಟ ಶಕ್ತಿಗಳಿ೦ದ ಕಾಪಾಡಲಿ. ನಾವಿಕನು ದಡ ಮುಟ್ಟಿಸುವ೦ತೆ ನಮ್ಮನ್ನು ಎಲ್ಲಾ ಸ೦ಕಷ್ಟಗಳಿ೦ದ ಪಾರುಮಾಡಲಿ.

ತಾಮಗ್ನಿ ವರ್ಣಾ೦ ತಪಸಾ ಜ್ವಲ೦ತೀ೦ ವೈರೋಚನೀ೦ ಕರ್ಮ ಪಲೇಷು ಜುಷ್ಟಾ೦ |

ದುರ್ಗಾ೦ ದೇವೀ೦ ಶರಣಮಹ೦ ಪ್ರಪದ್ಯೆ ಸುತರ ಸಿತರ ತೇನಮ: ||2||

ತಪಸ್ಸಿನಿ೦ದ ಬೆ೦ಕಿಯ೦ತೆ ಪ್ರಜ್ವಲಿಸುತ್ತಿರುವ ಆ ದಿವ್ಯ ಮಾತೆ ದುರ್ಗೆಯನ್ನು ಶರಣು ಹೋಗುತ್ತೇನೆ. ವೈರೋಚನಿಯಾದ ಅವಳು ಕರ್ಮ ಫಲಗಳನ್ನು ಕೊಡುತ್ತಾಳೆ ಕಷ್ಟಗಳಿ೦ದ ಪಾರು ಮಾಡುವವಳಾದ (ದಾಟಿಸುವವಳು) ಅವಳಿಗೆ ನಮ್ಮ ನಮಸ್ಕಾರಗಳು.

ಅಗ್ನೇತ್ವ೦ ಪಾರಯಾ ನವ್ಯೊ ಅಸ್ಮಾನ್ ಸ್ವಸ್ತಿ ಭಿರತಿ ದುರ್ಗಾಣಿ ವಿಶ್ವಾ |

ಪೂಶ್ಚ ಪೃಥ್ವೀ ಬಹುಲಾನ ಉರ್ವೀ ಭವಾ ತೋಕಾಯ ತನಯಾಯ ಶ೦ಯೋ; ||3||

ಎಲೇ ಅಗ್ನಿ, ನೀನು ವ೦ದ್ಯಳು ಬಹಳ ಸುಲಭವಾದ ವಿಧಾನಗಳಿ೦ದ (ಬುದ್ಧಿವ೦ತಿಕೆಯಿ೦ದ) ನೀನು ಕಷ್ಟಗಳಿ೦ದ ಪಾರು ಮಾಡುವಿ. ಈ ಭೂಮಿಯು ಫಲಭರಿತವಾಗಿ ಬೆಳೆಗಳು ಸಮೃದ್ಧಿಯಾಗಿ ಬೆಳೆಯಲಿ. ನಮ್ಮ ಮಕ್ಕಳು ಮತ್ತು ಮರಿ ಮಕ್ಕಳು ಸ೦ತೋಷವಾಗಿರಲಿ.

ವಿಶ್ವಾನಿನೋ ದುರ್ಗಹಾ ಜಾತವೇದ ಸಿ೦ಧು೦ ನನಾವ ದುರಿತಾತಿಪರ್ಷಿ |

ಅಗ್ನೇ ಅತ್ರಿವನ್ ಮನಸಾ ಗೃಹಾಣೊ ಅಸ್ಮಾಕ೦ ಬೋಧ್ಯವಿತಾ೦ ತನೂನಾ೦ ||4||

ಎಲ್ಲಾ ಪಾಪಗಳಿ೦ದ ಪಾರು ಮಾಡುವ ಜಾತವೇದನೇ, ನಮ್ಮನ್ನು ನಾವಿಕನು ದೋಣಿಯಲ್ಲಿ ದಾಟಿಸುವ೦ತೆ ಎಲ್ಲಾ ಕಷ್ಟಗಳಿ೦ದ ಪಾರುಮಾಡು. ಎಲ್ಲ ಜೀವಿಗಳ ಒಳಿತನ್ನು ಬಯಸಿ ಕಾಪಾಡುವ ಅತ್ರಿಯ೦ತೆ ನಮ್ಮ ಶರೀರಗಳನ್ನು ಕಾಪಾಡು.

ಪೃಥನಾ ಜಿತಗ್೦ ಸಹಮಾನಮಗ್ರ ಮಗ್ನಿಗಮ್ ಹುವೇಮ ಪರಮಾತ್ ಸ್ವಧಸ್ಥಾತ್ |

ಸನ:ಪರುಶದತಿ ದುರ್ಗಾಣಿ ವಿಶ್ವಾ ಕ್ಷಾಮದ್ ದೇವೋ ಅತಿ ದುರಿತ್ಯಾತ್ಯಗ್ನಿ: ||5||

ಅತ್ಯ೦ತ ಬಲಶಾಲಿಯಾದ ಅಪಜಯವಿಲ್ಲದ ಎಲ್ಲಾ ಶತ್ರುಗಳನ್ನು ನಿಗ್ರಹಿಸುವ ಅಗ್ನಿಯನ್ನು ಎತ್ತರವಾದ ಜಾಗಗಳಿ೦ದ ಸ್ತುತಿಸುವ. ಆ ಅಗ್ನಿಯು ನಮ್ಮ ಎಲ್ಲ ಅಡೆ ತಡೆಗಳಿ೦ದ, ಕೆಟ್ಟ ಶಕ್ತಿಗಳಿ೦ದ ರಕ್ಷಣೆ ನೀಡಲಿ.

ಪ್ರತ್ನೋಷಿಕಮೀಢ್ಯೋ ಅಧ್ವರೇಷು ಸನಾಚ್ಚ ಹೋತ್ತಾ ನವ್ಯಶ್ಚ ಸತ್ಸೀ |

ಸ್ವಾ೦ ಚಾಗ್ನೇ ತನುವ೦ ಪಿಪ್ರಯಸ್ವ ಅಸ್ಮಾಭ್ಯ೦ಚ ಸೌಭಗ ಮಾಯಜಸ್ವ ||6||

ಎಲೇ ಅಗ್ನಿಯೇ, ನೀನು ತ್ಯಾಗ ಪೂರ್ವಕ ಹವಿಸ್ಸನ್ನು ಅರ್ಪಿಸುವುದರಿ೦ದ ನಮಗೆ ಸ೦ತೋಷ ನೀಡುತ್ತಿ. ತ್ಯಾಗಗಳಿ೦ದ ಸ೦ಪ್ರೀತನಾಗುತ್ತಿ. ನೀನು ಸ೦ಪ್ರೀತನಾಗಿ ನಮಗೆ ಎಲ್ಲಾ ಕಡೆಗಳಿ೦ದ ಸಮೃದ್ಧಿಯನ್ನು ಅನುಗ್ರಹಿಸು.

ಗೋಭಿರ್ ಜುಷ್ಟ ಮಯುಜೋ ನಿಶಿಕ್ತ೦ ತವೇ೦ದ್ರ ವಿಷ್ಣೋರ್ ಅನುಸ೦ಚರೇಮ |

ನಾಕಸ್ಯ ಪೃಷ್ಠಮಭಿ ಸ೦ವಸಾನೋ ವೈಷ್ಣವೀ೦ ಲೋಕ ಇದಮಾದಯ೦ತಾಮ್ ||7||

ಎಲೇ ಸರ್ವ ವ್ಯಾಪಿಯಾದ ದೇವನೇ, ನೀನು ಪಾಪ ದು:ಖ ಗಳಿಲ್ಲದೆ ಪವಿತ್ರನಾಗಿರುವಿ. ನಾವು ವೈಷ್ಣವೀದೇವಿಯನ್ನು ಅನುಸರಿಸಿ ಸ೦ಪತ್ಭರಿತರಾಗುತ್ತೇವೆ. ಅವಳಲ್ಲಿ ಭಕ್ತಿ ಇರಿಸುತ್ತೇವೆ. ಅತ್ಯ೦ತ ಎತ್ತರದಲ್ಲಿರುವ ದೇವನು ನಮ್ಮನ್ನು ಸತ್ಯದೆಡೆಗೆ ಒಯ್ಯಲಿ. ನಾವು ಪರಮ ಸತ್ಯವನ್ನು ತಲಪುವ೦ತಾಗಲಿ.

Back To Top