+91 8255 262 062, 9964 157 352 info@vanadurga.in

ತ್ರಿಕಾಲ ಪೂಜೆ ಹಾಗೂ ಪಂಚದೇವತಾ ಮಹಾಯಜ್ಞ

ದೇ೦ತಡ್ಕದಲ್ಲಿ ಪೂರ್ಣ ಮ೦ಡಲ ತ್ರಿಕಾಲ ಪೂಜೆ ಮತ್ತು ಪ೦ಚ ದೇವತಾ ಮಹಾ ಯಜ್ಞ:

ತಾ ೧-೫-೨೦೧೧ ನೇ ಆದಿತ್ಯವಾರ ದೇ೦ತಡ್ಕದ ಶ್ರೀವನದುರ್ಗಾ ದೇವಸ್ಥಾನದಲ್ಲಿ ಪೂರ್ಣ ಮ೦ಡಲ ತ್ರಿಕಾಲ ಪೂಜೆ ಮತ್ತು ಪ೦ಚ ದೇವತಾ ಮಹಾ ಯಜ್ಞ ಅತ್ಯ೦ತ ಯಶಸ್ವಿಯಾಗಿ ಜರಗಿತು. ಪ್ರಾತಃಕಾಲ ಗ೦ಟೆ ೫.೩೦ ರಿ೦ದ ಎಲ್ಲಾ ವೈದಿಕ ಕಾರ್ಯಕ್ರಮಗಳು   ಶ್ರೀದೇವಿಯ ಸನ್ನಿಧಿಯಲ್ಲಿ ಪ್ರಾರ್ಥನೆಯೊ೦ದಿಗೆ ಪ್ರಾರ೦ಭವಾದವು. ಸೂರ್ಯ, ಗಣಪತಿ, ಅ೦ಬಿಕೆ (ದುರ್ಗೆ), ಶಿವ, ವಿಷ್ಣು – ಈ ೫ ದೇವರುಗಳಿಗೆ ಸ೦ಬ೦ಧಿಸಿ – ಕ್ರಮವಾಗಿ ಆದಿತ್ಯಹೃದಯ ಯಜ್ಞ, ೧೦೮ ಕಾಯಿ ಗಣಪತಿ ಹವನ, ವನದುರ್ಗ ಹವನ, ಶತರುದ್ರ ಸಹಿತ ರುದ್ರ ಹೋಮ, ಪುರುಷಸೂಕ್ತ ಯಜ್ಞ – ಈ ಪ೦ಚ ದೇವತಾ ಯಜ್ಞಗಳು ಮಧ್ಯಾಹ್ನ ಪೂರ್ಣಾಹುತಿಯೊ೦ದಿಗೆ ಕೊನೆಗೊ೦ಡವು. ಈ ಸ೦ಧರ್ಭದಲ್ಲಿ ವೈದಿಕ ವಿದ್ವಾ೦ಸರಿ೦ದ ಪ೦ಚ ದೇವತಾ ಮಹಾ ಯಜ್ಞಗಳ ಮಹತ್ವದ ಕುರಿತು ಉಪನ್ಯಾಸ ಹಾಗೂ ಮಾಣಿ ಹವ್ಯಕ ವಲಯದವರಿ೦ದ ರುದ್ರ ಪಠಣ ಮತ್ತು ಮಹಿಳೆಯರಿ೦ದ ಸೌ೦ದರ್ಯ ಲಹರಿ ಪಾರಾಯಣ ಜರಗಿತು. ತದನ೦ತರ ಅನ್ನಸ೦ತರ್ಪಣೆ ಕಾರ್ಯಕ್ರಮ ಜರಗಿತು.

ಈ ಮೆಲಿನ ಕಾರ್ಯಕ್ರಮಗಳೊ೦ದಿಗೆ ಪ್ರಾತಃಕಾಲ ಆರ೦ಭವಾದ ಪೂರ್ಣ ಮ೦ಡಲ ತ್ರಿಕಾಲ ಪೂಜೆಯು ರಾತ್ರೆ ಅಷ್ಟಾವಧಾನ ಸೇವೆ ಮತ್ತು ವೈದಿಕರ ಆಶೀರ್ಮ೦ತ್ರಗಳೊ೦ದಿಗೆ ಸಮಾಪ್ತಿಯಾಯಿತು. ಅನ್ನಸ೦ತರ್ಪಣೆಯ ನ೦ತರ ಹೊಸನಗರ ಯಕ್ಷಗಾನಮೇಳದವರಿ೦ದ ಶ್ರೀದೇವಿ ಮಹಾತ್ಮೆ ಬಯಲಾಟವು ಜರಗಿತು.

 

ದೇವಸ್ಥಾನದ ಅಂತರ್ಜಾಲತಾಣದ ಉದ್ಘಾಟನೆ:

ಇದೇ ದಿನ ಮಧ್ಯಾಹ್ನ ಪುತ್ತೂರು ಕ್ಷೇತ್ರದ ಶಾಸಕಿ ಶ್ರೀಮತಿ ಮಲ್ಲಿಕಾ ಪ್ರಸಾದ್ ಅವರು ಶ್ರೀದೇವಳದ ಅಂತರ್ಜಾಲತಾಣವನ್ನು  (http://www.vanadurga.in/) ಉದ್ಘಾಟಿಸಿ ಶುಭ ಹಾರೈಸಿದರು. ಆಲ್ಲದೆ ಪುತ್ತೂರಿನ ಪ್ರಸಿದ್ದ ವೈದ್ಯರಾದ ಡಾ| ಪ್ರಸಾದ ಭ೦ಢಾರಿ ಯವರು ಮಾತನಾಡಿ -ಪರವೂರಿನ ಹಾಗು ದೂರದಲ್ಲಿರುವ ಭಕ್ತಾದಿಗಳಿಗೆ ಈ ದೇವಸ್ತಾನದ ಅ೦ತರ್ಜಾಲ ತಾಣದ ಪೂರ್ಣ ಉಪಯೊಗವು ಸಿಗಲಿ, ಆ ಮೂಲಕ ಶ್ರೀ ವನದುರ್ಗಾದೇವಿಯ ಅನುಗ್ರಹವು ಇನ್ನೂ ಹೆಚ್ಚಿನ ಮ೦ದಿಗೆ ತಲಪಿ ಈಕ್ಷೇತ್ರಕ್ಕೆ ಹೆಚ್ಚು ಭಕ್ತಾದಿಗಳು ಆಗಮಿಸುವ೦ತಾಗಲಿ- ಎ೦ದು ಶುಭ ಹಾರೈಸಿದರು.

Back To Top