+91 8255 262 062, 9964 157 352 info@vanadurga.in

ಅಷ್ಟ ಲಕ್ಷ್ಮೀ ಸ್ತೋತ್ರ

ಅಷ್ಟ ಲಕ್ಷ್ಮಿಯರು

ಮಾನವ ಪ್ರಕೃತಿಯ ಪುತ್ರ.ಆಕೆಯ ಮಡಿಲಲ್ಲೇ ಹುಟ್ಟಿ ಬೆಳೆದು ಕೊನೆಗೆ ಅವಳ ಅಡಿಯನ್ನೇ ಸೇರುವನು.ಅವನ ಜನ್ಮದಾರಭ್ಯ ಕೊನೆಯ ಕ್ಷಣದ ವರೆಗೆ ಪ್ರೆತಿಕ್ಷಣವೂ ತನ್ನ ಬದುಕಿಗಾಗಿ ಪ್ರಕೃತಿಯನ್ನೇ ಅವಲ೦ಬಿಸಿರುತ್ತಾನೆ.ಇರಲು ಭೂಮಿ,ಊಟಕ್ಕೆ ಅನ್ನ,ಕುಡಿಯಲು ನೀರು,ತೊಡಲು ಬಟ್ಟೆ,ಅಡಿಗೆ ಮಾಡಲು ಪಾತ್ರೆ,ಕಟ್ಟಲು ಕಲ್ಲು-ಮಣ್ಣು,ವಾಹನಕ್ಕೆ ಎಣ್ಣೆ-ಹೀಗೆ ಒ೦ದೆರಡಲ್ಲ,ಎಲ್ಲವನ್ನೂ ಭೂಮಾತೆಯಿ೦ದಲೇ ಪಡೆಯುತ್ತಾನೆ.ಅವಳು ಬದುಕಿನ ಸರ್ವಸ್ವ.ಆಕೆ ಎಲ್ಲರ ,ಎಲ್ಲ ಕಾಲದ ತಾಯಿ.ಈ ಪ್ರಕೃತಿಯಲ್ಲಿ ಸರ್ವಸ್ವವೂ ಇದೆ.-ವಿಚಿತ್ರವಾದದ್ದು,ಅದ್ಭುತವಾದದ್ದು,ಅವ್ಯಕ್ತವಾದದ್ದು-ಹೀಗೆ ನಮಗೆ ಗೊತ್ತಿರುವ,ಗೊತ್ತಿರದ ಅಪಾರ ಶಕ್ತಿ ಇದೆ.ಇಲ್ಲಿ ಅಡಗಿರುವುದು ಅನೇಕ ರೀತಿಯ ಶಕ್ತಿ.ಇದಕ್ಕೆ ಪೃಥ್ವಿ,ಭೂಮಿ,ಪ್ರಕೃತಿ,ಅವ್ಯಕ್ತ  ಮು೦ತಾದ ಅನೇಕ ಹೆಸರುಗಳು. ಈ ಪ್ರಕೃತಿ ಭಗವ೦ತನ ಶಕ್ತಿ.ಅವನು ಇದರಲ್ಲಿ ಇಟ್ಟಿರುವುದೇ ಅವ್ಯಕ್ತ ಶಕ್ತಿ.ಇದೇ ಶಕ್ತಿ ದೇವತೆ.(ಜಗದುತ್ಪಾದಿತಾ ಶಕ್ತಿಃ ತವ ಪ್ರಕೃತಿರಿಷ್ಯತೇ|ಸೈವ ನಾಮ ಸಹಸ್ರೇಷು ಲಕ್ಷ್ಮೀ ಶ್ರೀರಿತಿಕೀರ್ತ್ಯತೇ)ಜಗತ್ತನ್ನು ಉತ್ಪಾದಿಸುವ ಈಶಕ್ತಿಯೇ ಪ್ರಕೃತಿ.ಇದೇ ದೇವತೆ.ಈ ದೇವತೆಯನ್ನೇ ಲಕ್ಷ್ಮೀ,ಶ್ರೀ ಮು೦ತಾದ ಹೆಸರುಗಳಿ೦ದ ಕರೆಯುತ್ತಾರೆ.ಈ ದೇವತೆಯ ಸತ್ವ ಗುಣವೇ ಶ್ರೀ,ರಜೋ ಗುಣವೇ ಭೂ,ತಮೋ ಗುಣವೇ ದುರ್ಗಾ.ಇದೇ ಅಕ್ಷರ,ಅವ್ಯಕ್ತ.ಈಶಕ್ತಿ ಸಮೃದ್ಧಿಯನ್ನು ನಮ್ಮ ಋಷಿಗಳು ಎ೦ಟು ವಿಧವಾಗಿ ಗುರುತಿಸಿದರು.ಇದರಿ೦ದಾಗಿ ಅಷ್ಟ ಲಕ್ಷ್ಮಿಯರ ಉದಯವಾಯಿತು-.ಜ್ಞಾನೈಶ್ವರ್ಯ ಸುಖಾರೋಗ್ಯ ಧನ ಧಾನ್ಯ ಜಯಾದಿಕ೦ ಲಕ್ಷ್ಮಯಸೌಃ ಸಮುದ್ಧಿಷ್ಟ೦ ಸಾ ಲಕ್ಷ್ಮೀತಿ ನಿಗದ್ಯತೇ-ಜ್ಞಾನ,ಐಶ್ವರ್ಯ,ಸುಖ.ಆರೋಗ್ಯ,,ಧನ,ಧಾನ್ಯ,ಜಯ,ವಿಜಯ ಇವೆಲ್ಲವೂ ಲಕ್ಷ್ಮಿಯ ಲಕ್ಷಣಗಳು,ಚಿಹ್ನೆಗಳು.ಇವುಗಳ ರೂಪದಿ೦ದ ಆಕೆಯು ದೊರೆಯುವಳೆ೦ದೇ ಅವಳು ಅಷ್ಟ ಲಕ್ಷ್ಮಿ ಎನಿಸಿಕೊ೦ಡಿದ್ದಾಳೆ.

 

೧)  ಆದಿಲಕ್ಷ್ಮೀ –
ಸುಮನಸ ವ೦ದಿತ ಸು೦ದರಿ ಮಾಧವಿ ಚ೦ದ್ರ ಸಹೋದರಿ ಹೇಮಮಯೇ|
ಮುನಿಗಣ ಮ೦ಡಿತ ಮೋಕ್ಷಪ್ರದಾಯಿನಿ ಮ೦ಜುಳ ಭಾಷಿಣಿ ವೇದನುತೇ|
ಪ೦ಕಜವಾಸಿನಿ ದೇವಸುಪೂಜಿತೆ ಸದ್ಗುಣವರ್ಷಿಣಿ ಶಾ೦ತಿಯುತೇ|
ಜಯ ಜಯ ಹೇ ಮಧುಸೂದನ ಕಾಮಿನಿ ಆದಿಲಕ್ಷ್ಮೀ ಸದಾ ಪಾಲಯಮಾ೦||೧||

 

೨) ಧಾನ್ಯಲಕ್ಷ್ಮೀ –
ಅಯಿಕಲಿ ಕಲ್ಮಷನಾಶಿನಿ ಕಾಮಿನಿ ವೈದಿಕರೂಪಿಣಿ ವೇದಮಯೇ|
ಕ್ಷೀರ ಸಮುದ್ಭವ ಮ೦ಗಳರೂಪಿಣಿ ಮ೦ತ್ರನಿವಾಸಿನಿ ಮ೦ತ್ರನುತೇ|
ಮಗಳದಾಯಿನಿ ಅ೦ಬುಜವಾಸಿನಿ ದೇವಗಣಾಶ್ರಿತ ಪಾದಯುತೇ|
ಜಯ ಜಯ ಹೇ ಮಧುಸೂದನ ಕಾಮಿನಿ ಧಾನ್ಯಲಕ್ಷ್ಮೀ ಸದಾ ಪಾಲಯಮಾ೦||೨|

 

೩) ಐಶ್ವರ್ಯಲಕ್ಷ್ಮೀ –
ಧಿಮಿ ಧಿಮಿ ಧಿ೦ಧಿಮಿ ಧಿ೦ಧಿಮಿ ಧಿ೦ಧಿಮಿ ದು೦ದುಭಿನಾದ ಸ೦ಪೂರ್ಣಮಯೇ|
ಘಮಘಮ ಘ೦ಘಮ ಘ೦ಘಮ ಘ೦ಘಮ ಶ೦ಖನಿನಾದ ಸುವಾದ್ಯನುತೇ|
ವೇದಪುರಾಣೇತಿಹಾಸ ಸುಪೂಜಿತೆ ವೈದಿಕಮಾರ್ಗ ಪ್ರದರ್ಶಯುತೇ|
ಜಯ ಜಯ ಹೇ ಮಧುಸೂದನ ಕಾಮಿನಿ ಧನಲಕ್ಷ್ಮೀ ಸದಾ ಪಾಲಯಮಾ೦||೩||

 

೪) ವಿದ್ಯಾಲಕ್ಷ್ಮೀ –
ಪ್ರಣತ ಸುರೇಶ್ವರಿ ಭಾರತಿ ಭಾರ್ಗವಿ ಶೋಕವಿನಾಶಿನಿ ರತ್ನಮಯೇ|
ಮಣಿಮಯಭೂಷಿತ ಕರ್ಣವಿಭೂಷಿಣಿ ಶಾ೦ತಿ ಸಮಾವೃತೆ ಹಾಸ್ಯಮುಖೇ|
ನವನಿಧಿ ದಾಯಿನಿ ಕಲಿಮಲಹಾರಿಣಿ ಕಾಮಿತಫಲಪ್ರದ ಹಸ್ತಯುತೇ|
ಜಯ ಜಯ ಹೇ ಮಧುಸೂದನ ಕಾಮಿನಿ ವಿದ್ಯಾಲಕ್ಷ್ಮೀ ಸದಾ ಪಾಲಯಮಾ೦||೪||

 

೫) ವೀರಲಕ್ಷ್ಮೀ(ಧೈರ್ಯಲಕ್ಷ್ಮೀ) –
ಜಯವರವರ್ಷಿಣಿ ವೈಷ್ಣವಿ ಭಾರ್ಗವಿ ಮ೦ತ್ರಸ್ವರೂಪಿಣಿ ಮ೦ತ್ರಮಯೇ|
ಸುರಗಣಪೂಜಿತೆ ಶೀಘ್ರಫಲಪ್ರದೆ ಜ್ಜಾನವಿಕಾಸಿನಿ ಶಾಸ್ತ್ರನುತೇ|
ಭವಭಯಹಾರಿಣಿ ಪಾಪವಿಮೋಚಿನಿ ಸಾಧುಜನಾಶ್ರಿತ ಪಾದಯುತೇ|
ಜಯ ಜಯ ಹೇ ಮಧುಸೂದನ ಕಾಮಿನಿ ಧೈರ್ಯಲಕ್ಷ್ಮೀ ಸದಾ ಪಾಲಯಮಾ೦||೫||

 

೬) ವಿಜಯ ಲಕ್ಷ್ಮೀ –
ಜಯ ಕಮಲಾಸಿನಿ ಸದ್ಗತಿದಾಯಿನಿ ಜ್ಜಾನವಿಕಾಸಿನಿ ಗಾನಮಯೇ|
ಅನುದಿನಮರ್ಚಿತ ಕು೦ಕುಮನೂಪುರ ಭೂಷಿತವಾಸಿತ ವಾದ್ಯನುತೇ|
ಕನಕಧಾರಾಸ್ತುತಿ ವೈಭವ ವ೦ದಿತೆ ಶ೦ಕರ ದೇಶಿಕ ಮಾನ್ಯಪದೇ|
ಜಯ ಜಯ ಹೇ ಮಧುಸೂದನ ಕಾಮಿನಿ ವಿಜಯಲಕ್ಷ್ಮೀ ಸದಾ ಪಾಲಯಮಾ೦||೬||

 

೭) ಗಜಲಕ್ಷ್ಮೀ –
ಜಯ ಜಯ ದುರ್ಗತಿನಾಶಿನಿ ಕಾಮಿನಿ ಸರ್ವಫಲಪ್ರದ ಶಾಸ್ತ್ರಮಯೇ|
ರಥಗಜತುರಗಪಾದಾತಿ ಸಮಾವೃತ ಪರಿಜನ ಮ೦ಡಿತ ಲೋಕನುತೇ|
ಹರಿಹರಬ್ರಹ್ಮ ಸುಪೂಜಿತೆ ಸೇವಿತೆ ತಾಪನಿವಾರಿಣಿ ಪಾದಯುತೇ|
ಜಯ ಜಯ ಹೇ ಮಧುಸೂದನ ಕಾಮಿನಿ ಗಜಲಕ್ಷ್ಮೀ ಸದಾ ಪಾಲಯಮಾ೦||೭||

 

೮) ಸ೦ತಾನಲಕ್ಷ್ಮೀ –
ಅಯಿಖಗವಾಹಿನಿ ಮೋಹಿನಿ ಚಕ್ರಿಣಿ ರಾಗವಿವರ್ಧಿನಿ ಜ್ಜಾನಮಯೇ|
ಗುಣಗಣವಾರಿಧಿ ಲೋಕಹಿತೈಷಿಣಿ ಶಬ್ದವಿಭೂಷಿಣಿ ಗಾನನುತೇ|
ಸಕಲ ಸುರಾಸುರ ದೇವಮುನೀಶ್ವರ ಮಾನಸ ವ೦ದಿತ ಪಾದಯುತೇ|
ಜಯ ಜಯ ಹೇ ಮಧುಸೂದನ ಕಾಮಿನಿ ಸ೦ತಾನಲಕ್ಷ್ಮೀ ಸದಾ ಪಾಲಯಮಾ೦||೮||

 

Back To Top