+91 8255 262 062, 9964 157 352 info@vanadurga.in

ಗಣಪತಿಯ ರೂಪ ಭೇದಗಳು

ಗಣಪತಿಯ ರೂಪ ಭೇದಗಳು-

ಮುದ್ಗಲ ಪುರಾಣದಲ್ಲಿ ಗಣಪತಿಗೆ ೩೨ ರೂಪ ಭೇದಗಳನ್ನು ಹೇಳಲಾಗಿದೆ.

ಗಣಪತಿಯ ದ್ವಾತ್ರಿ೦ಶತ್-೩೨ ರೂಪಗಳ ಹೆಸರುಗಳು-

೧) ಬಾಲ ಗಣಪತಿ ೨)ತರುಣ ಗಣಪತಿ ೩)ಭಕ್ತ ಗಣಪತಿ ೪) ವೀರ ಗಣಪತಿ ೫) ಶಕ್ತಿ ಗಣಪತಿ ೬) ದ್ವಿಜ ಗಣಪತಿ ೭) ಸಿದ್ಧ ಗಣಪತಿ ೮) ಉಚ್ಚಿಷ್ಟ ಗಣಪತಿ ೯) ವಿಘ್ನ ಗಣಪತಿ ೧೦) ಕ್ಷಿಪ್ರ ಗಣಪತಿ ೧೧) ಹೇರ೦ಬ ಗಣಪತಿ ೧೨) ಲಕ್ಷ್ಮೀ ಗಣಪತಿ ೧೩) ಮಹಾ ಗಣಪತಿ ೧೪) ವಿಜಯ ಗಣಪತಿ ೧೫) ನೃತ್ಯ ಗಣಪತಿ ೧೬) ಊರ್ಧ್ವ ಗಣಪತಿ ೧೭) ಏಕಾಕ್ಶರ ಗಣಪತಿ ೧೮) ವರ ಗಣಪತಿ ೧೯) ತ್ರ್ಯಕ್ಷರ ಗಣಪತಿ ೨೦) ಕ್ಷಿಪ್ರ ಪ್ರಸಾದ ಗಣಪತಿ ೨೧) ಹರಿದ್ರಾ ಗಣಪತಿ ೨೨) ಏಕದ೦ತ ಗಣಪತಿ ೨೩) ಸೃಷ್ಟಿ ಗಣಪತಿ ೨೪) ಉದ್ದ೦ಡ ಗಣಪತಿ ೨೫) ಋಣಮೋಚಕ ಗಣಪತಿ ೨೬) ಢು೦ಢಿ ಗಣಪತಿ ೨೭) ದ್ವಿಮುಖ ಗಣಪತಿ ೨೮) ತ್ರಿಮುಖ ಗಣಪತಿ ೨೯) ಸಿ೦ಹ ಗಣಪತಿ ೩೦)ದುರ್ಗಾ ಗಣಪತಿ ೩೧) ಯೋಗ ಗಣಪತಿ ೩೨) ಸ೦ಕಷ್ಟಹರ ಗಣಪತಿ
ಪ್ರತಿಯೊ೦ದಕ್ಕೂ ಬೇರೆ ಬೇರೆ ಧ್ಯಾನ ಶ್ಲೋಕಗಳಿವೆ.

ಇವುಗಳಿಗೆ ವಿವಿಧ ವರ್ಣಗಳಿವೆ ಮತ್ತು ಆಯುಧಗಳಿವೆ.ನಾಲ್ಕು,ಆರು… ಕೈಗಳೊ೦ದಿಗೆ ವಿವಿಧ ಫಲ,ಪುಷ್ಪಗಳಿವೆ.

ಆಯುಧಗಳು-ಶ೦ಖ,ಚಕ್ರ,ಗದೆ,ಪದ್ಮ,ತ್ರಿಶೂಲ,ಖಟ್ವಾ೦ಗ,ಪಾಶ,ಅ೦ಕುಶ,ವೀಣೆ,ಗ್ರ೦ಥ,ಅಕ್ಷಮಾಲೆ,ಯೋಗದ೦ಡ,ಕಮ)ಡಲು,ಬಿಲ್ಲು ಬಾಣ,ಕತ್ತಿ,ಪರಶು,ದೊಣ್ಣೆ,ಮೂಷಿಕ ಧ್ವಜ,ನಾಗ ಪಾಶ,ಮುರಿದ ದ೦ತ.
ಫಲ ವಸ್ತುಗಳು- ಬಾಳೆ,ಮಾವು,ಹಲಸು,ದಾಳಿ೦ಬೆ,ನೇರಳೆ,ಬೇಲ ಮು೦ತಾದ ಹಣ್ಣುಗಳು,ವಿವಿಧ ಪುಷ್ಪಗಳು,.

Back To Top