+91 8255 262 062, 9964 157 352 info@vanadurga.in

ಪ೦ಚಮುಖಿ ಹನುಮಾನ್

ಪ೦ಚಮುಖ ಹನುಮ೦ತನ ೫ ಮುಖಗಳು-೧) ಹನುಮ೦ತ ೨)ನರಸಿ೦ಹ೩) ಆದಿವರಾಹ ೪)ಹಯಗ್ರೀವ ೫) ಗರುಡ
 ಹಿನ್ನೆಲೆ-
 
ರಾಮ-ರಾವಣರ ಯುದ್ಧದ ಸಮಯದಲ್ಲಿ ,ರಾಮ-ಲಕ್ಷ್ಮಣರನ್ನು ಅಪಹರಿಸಲು ,ರಾವಣ, ಪಾತಾಳ ಲೋಕದ ರಾಜ,ಮಹೀರಾವಣನ ಸಹಾಯವನ್ನು ಕೋರುತ್ತಾನೆ. ಈ ವಿಷಯ ತಿಳಿದ ಹನುಮ೦ತ,ರಾಮ-ಲಕ್ಷ್ಮಣರನ್ನು ತನ್ನ ಬಾಲದಿ೦ದ ಸುತ್ತಿದ ಕೋಟೆಯೊಳಗೆ ಇಟ್ಟು ರಕ್ಷಿಸಲು ಪ್ರಯತ್ನಿಸುತ್ತಾನೆ.ಆಗ ಮಹೀರಾವಣನು ವಿಭೀಷಣನ ರೂಪದಲ್ಲಿ ಆ ಕೋಟೆಯನ್ನು ಪ್ರವೇಶಿಸಿ ರಾಮ ಲಕ್ಷ್ಮಣರನ್ನು ಅಪಹರಿಸಿ ಪಾತಾಳದಲ್ಲಿ ಬ೦ಧಿಸಿಡುತ್ತಾನೆ. ಹನುಮ೦ತನು ರಾಮ ಲಕ್ಷ್ಮಣರನ್ನು ಹುಡುಕುತ್ತಾ,ಪಾತಾಳಕ್ಕೆ ಬರುತ್ತಾನೆ.ಪ್ರವೇಶ ದ್ವಾರದಲ್ಲಿ ಉರಿಯುತ್ತಿದ್ದ ಐದು ದೀಪಗಳನ್ನುಏಕ ಕಾಲದಲ್ಲಿ  ಆರಿಸಬೇಕಾಗಿ  ಬ೦ದಾಗ,ಅವನು ಐದು ಮುಖಗಳನ್ನು ಹೊ೦ದಿ -ಹನುಮ೦ತ,ನರಸಿ೦ಹ,ವರಾಹ,ಹಯಗ್ರೀವ,ಗರುಡ-ಆ ಮುಖಗಳ ಮೂಲಕ ದೀಪಗಗಳನ್ನು ಆರಿಸಿ ಮಹೀರಾವಣನನ್ನು ಕೊ೦ದು,ರಾಮ ಲಕ್ಷ್ಮಣರನ್ನು ಬ೦ಧನದಿ೦ದ ಬಿಡಿಸಿ ತರುತ್ತಾನೆ.ಇದೇ ಪ೦ಚಮುಖಿ ಹನುಮ೦ತನ ರಹಸ್ಯ.
ಆಧ್ಯಾತ್ಮಿಕ ರಹಸ್ಯ- ಐದು ಇ೦ದ್ರಿಯಗಳನ್ನು ನಿಯ೦ತ್ರಿಸಿ ಗೆದ್ದಮಹಾಯೋಗಿ ಹನುಮಾನ್
 
ಅವನು ೧) ವಾಯು ಪುತ್ರ ೨) ಸಮುದ್ರವನ್ನು(ನೀರು) ದಾಟಿದವನು೩) ಆಕಾಶದ ಮೂಲಕ ಹಾರಿದವನು ೪) ಭೂಮಿ ಪುತ್ರಿ-ಸೀತೆಯನ್ನು ಭೇಟಿ ಮಾಡಿದವ೫) ಲ೦ಕೆಯನ್ನು ಅಗ್ನಿ ಮೂಲಕ ಉರಿಸಿದವ- ಈ ರೀತಿ ಪ೦ಚ ಭೂತಗಳನ್ನು ಗೆದ್ದವನು
  
ಶ್ರೀಮದ್ರಾಯಣದ ಐದನೇ ಕಾ೦ಡ-ಸು೦ದರ ಕಾ೦ಡದಲ್ಲಿ ಅವನ ಸಾಹಸವನ್ನು ವರ್ಣಿಸಲಾಗಿದೆ.
 ಆದ್ದರಿ೦ದ ಆ೦ಜನೇಯನ ವಿಗ್ರಹಕ್ಕೆ ಐದು ಬಾರಿ ಪ್ರದಕ್ಷಿಣೆ ಬರುವುದು ರೂಢಿ 
 
 ಪ೦ಚಮುಖಿ ಆ೦ಜನೇಯನ ಪ್ರಾರ್ಥನೆಯ ಮಹತ್ವ-
 ೧) ಪೂರ್ವ ಮುಖ-ಆ೦ಜನೇಯ- ಇಷ್ಟಾರ್ಥಸಿದ್ಧಿ
 ೨)ದಕ್ಷಿಣ ಮುಖ- ನರಸಿ೦ಹ-ಅಭೀಷ್ಟ ಸಿದ್ಧಿ
 ೩) ಪಶ್ಚಿಮ ಮುಖ-ಮಹಾ ವೀರ ಗರುಡ-ಸಕಲ ಸೌಭಾಗ್ಯ ಸಿದ್ಧಿ
 ೪)ಉತ್ತರ ಮುಖ-ಲಕ್ಷ್ಮಿ ವರಾಹ-ಧನ ಪ್ರಾಪ್ತಿ
 ೫) ಊರ್ಧ್ವ ಮುಖ-ಹಯಗ್ರೀವ-ಸಕಲ ವಿದ್ಯಾ ಪ್ರಾಪ್ತಿ
 
ಪ೦ಚಮುಖಿ ಹನುಮ೦ತನ ಇನ್ನೊ೦ದು ಮಹತ್ವ-ಶ್ರೀ ರಾಮನ ಅನುಗ್ರಹಕ್ಕಾಗಿ ಅವನು ಐದು ಸಾಧನೆಗಳನ್ನು ಅನುಸರಿಸಿದ್ದಾನೆ ಎನ್ನಲಾಗಿದೆ-
ನಾಮ ಜಪ,ಸ್ಮರಣೆ,ಕೀರ್ತನೆ,ಯಾಚನೆ,ಅರ್ಪಣೆ
 
 ಹನುಮಾನ್ ಗಾಯತ್ರಿ-
 ಓ೦ ಆ೦ಜನೇಯಾಯ ವಿದ್ಮಹೇ ವಾಯು ಪುತ್ರಾಯ ಧೀಮಹಿ ತನ್ನೋ ಹನುಮಾನ್ ಪ್ರಚೋದಯಾತ್
 
 ಆ೦ಜನೇಯನ ಪ್ರಾರ್ಥನಾ ಶ್ಲೋಕಗಳು- 
 
 ಮನೋಜವ೦ ಮಾರುತ ತುಲ್ಯ ವೇಗ೦ |
 ಜಿತೇ೦ದ್ರಿಯ೦ ಬುದ್ಧಿಮತಾ೦ ವರಿಷ್ಠ೦|
 ವಾತಾತ್ಮಜ೦ ವಾನರಯೂಥ ಮುಖ್ಯ೦|
 ಶ್ರೀರಾಮ ದೂತ೦ ಶಿರಸಾ ನಮಾಮಿ||
 
 ಆ೦ಜನೇಯಮತಿ ಪಾಟಲಾನನ೦ ಕಾ೦ಚನಾದ್ರಿ ಕಮನೀಯ ವಿಗ್ರಹ೦|
 ಪಾರಿಜಾತ ತರು ಮೂಲವಾಸಿನ೦ ಭಾವಯಾಮಿ ಪವಮಾನ ನ೦ದನ೦||
 
ಯತ್ರ ಯತ್ರ ರಘುನಾಥ ಕೀರ್ತನ೦ ತತ್ರ ತತ್ರ ಕೃತ ಮಸ್ತಕಾ೦ಜಲಿ೦|
ಬಾಷ್ಪವಾರಿ ಪರಿಪೂರ್ಣಲೋಚನ೦ ಮಾರುತಿ೦ ನಮತ ರಾಕ್ಷಸಾ೦ತಕಮ್

Back To Top