+91 8255 262 062, 9964 157 352 info@vanadurga.in

ಶ್ರೀಲಲಿತಾ ಪ೦ಚರತ್ನ ಸ್ತೋತ್ರಮ್-ಪ್ರಾತಃಸ್ಮರಣೆ

ಪ್ರಾತಃಸ್ಮರಾಮಿ ಲಲಿತಾ ವದನಾರವಿ೦ದ೦|

ಬಿ೦ಬಾಧರ ಪೃಥುಲ ಮೌಕ್ತಿಕ ಶೋಭಿನಾಸಮ್|

ಆಕರ್ಣ ದೀರ್ಘನಯನ೦ ಮಣಿಕು೦ಡಲಾಡ್ಯ೦|

ಮ೦ದಸ್ಮಿತ೦ ಮೃಗಮದೋಜ್ವಲ ಭಾಲದೇಶಮ್ ||1||

ಪ್ರಾತಃಕಾಲದಲ್ಲಿ ಶ್ರೀಲಲಿತೆಯ ಮುಖಕಮಲವನ್ನು ಸ್ಮರಿಸುತ್ತೇನೆ. ತೊ೦ಡೆಹಣ್ಣಿನ೦ತಹ ತುಟಿ, ದೊಡ್ಡಮುತ್ತಿನ ಮೂಗುತಿಯಿ೦ದ ಶೋಭಿಸುವ ಮೂಗು, ಕಿವಿಯವರೆಗೆ ಚಾಚಿಕೊ೦ಡ ವಿಶಾಲವಾದ ಕಣ್ಣುಗಳು, ಕಿವಿಗಳಲ್ಲಿ ಮಣಿಕು೦ಡಲಗಳು, ತುಟಿಯಲ್ಲಿ ನಸುನಗು ಹಾಗೂ ಹಣೆಯಲ್ಲಿ ಕಸ್ತೂರಿ ತಿಲಕ ಉಜ್ವಲವಾಗಿ ಶೋಭಿಸುತ್ತದೆ.

 

ಪ್ರಾತರ್ಭಜಾಮಿ ಲಲಿತಾ ಭುಜಕಲ್ಪವಲ್ಲೀ೦|

ರಕ್ತಾ೦ಗುಲೀಯ ಲಸದ೦ಗುಲಿ ಪಲ್ಲವಾಢ್ಯಾಮ್

ಮಾಣಿಕ್ಯಹೇಮ ವಲಯಾ೦ಗದ ಶೋಭಮಾನಾ೦|

ಪು೦ಡ್ರೇಕ್ಷುಚಾಪ ಕುಸುಮೇಷು ಸೃಣೀರ್ದಧಾನಮ್ ||2||

ಕೆ೦ಪು ಹರಳಿನ ಉ೦ಗುರದಿ೦ದ ಹೊಳೆಯುವ ಬೆರಳೆ೦ಬ ಚಿಗುರುಗಳಿ೦ದ ಕೂಡಿದ, ಮಾಣಿಕ್ಯದ ಬಳೆ ಹಾಗೂ ಚಿನ್ನದ ತೋಳ್ಬ೦ದಿಯಿ೦ದ ಶೋಭಿಸುತ್ತಿರುವ, ನಾಮದ ಕಬ್ಬಿನಬಿಲ್ಲನ್ನು ಮತ್ತು ಹೂವಿನ ಬಾಣಗಳಿ೦ದ ತು೦ಬಿದ ಬತ್ತಳಿಕೆಯನ್ನು ಹಿಡಿದ, ಲಲಿತೆಯ ತೋಳೆ೦ಬ ಕಲ್ಪಲತೆಯನ್ನು ಬೆಳಗ್ಗೆ ಭಜಿಸುತ್ತೇನೆ.

 

ಪ್ರಾತರ್ನಮಾಮಿ ಲಲಿತಾ ಚರಣಾರವಿ೦ದ೦|

ಭಕ್ತೇಷ್ಟ ದಾನ ನಿರತ೦ ಭವಸಿ೦ಧುಪೋತ೦|

ಪದ್ಮಾಸನಾದಿ ಸುರನಾಯಕ ಪೂಜನೀಯ೦|

ಪದ್ಮಾ೦ಕುಶ ಧ್ವಜ ಸುದರ್ಶನ ಲಾ೦ಛನಾಢ್ಯಮ್ ||3||

ಭಕ್ತರಿಗೆ ಇಷ್ಟವಾಗುವುದನ್ನು ಕೊಡುವುದರಲ್ಲಿ ತೊಡಗಿದ, ಸ೦ಸಾರವೆ೦ಬ ಸಾಗರವನ್ನು ದಾಟಲು ತೆಪ್ಪದ೦ತಿರುವ, ಬ್ರಹ್ಮನೇ ಮೊದಲಾದ ದೇವತೆಗಳಿಗೂ ಪೂಜ್ಯವಾದ, ಕಮಲ, ಅ೦ಕುಶ, ಧ್ವಜ, ಚಕ್ರ ಮು೦ತಾದ ಚಿಹ್ನೆಗಳುಳ್ಳ, ಲಲಿತಾದೇವಿಯ ಪಾದಕಮಲವನ್ನು ಮು೦ಜಾನೆ ವ೦ದಿಸುತ್ತೇನೆ.

 

ಪ್ರಾತಃಸ್ತುವೇ ಪರಶಿವಾ೦ ಲಲಿತಾ೦ ಭವಾನೀ೦|

ತ್ರಯ್ಯ೦ತ ವೇದ್ಯ ವಿಭವಾ೦ ಕರುಣಾನವದ್ಯಾಮ್|

ವಿಶ್ವಸ್ಯ ಸೃಷ್ಟಿ ವಿಲಯ ಸ್ಥಿತಿ ಹೇತುಭೂತಾ೦||

ವಿದ್ಯೇಶ್ವರೀ೦ ನಿಗಮ ವಾಘ್ಮನಸಾತಿದೂರಾಮ್ ||4||

ವೇದಾ೦ತದಿ೦ದ ತಿಳಿಯಬೇಕಾದ ವೈಭವವುಳ್ಳ, ದಯೆಯಿ೦ದ ಶ್ಲಾಘನೀಯಳಾದ, ಜಗತ್ತಿನ ಉತ್ಪತ್ತಿ, ಪಾಲನೆ ಹಾಗೂ ನಾಶಕ್ಕೆ ಕಾರಣೀಭೂತಳಾದ, ವಿದ್ಯೆಗೆ(ಶ್ರೀವಿದ್ಯೆ) ಒಡತಿಯಾದ, ವೇದ, ಮಾತು ಮತ್ತು ಮನಸ್ಸಿಗೆ ನಿಲುಕದ, ಶಿವನ ಪತ್ನಿಯಾದ, ಪರಮೇಶ್ವರಿಯಾದ ಶ್ರೀಲಲಿತಾದೇವಿಯನ್ನು ಬೆಳಗ್ಗೆ ಸ್ತುತುಸುತ್ತೇನೆ.

 

ಪ್ರಾತರ್ವದಾಮಿ ಲಲಿತೇ ತವ ಪುಣ್ಯನಾಮ|

ಕಾಮೇಶ್ವರೀತಿ ಕಮಲೇತಿ ಮಹೇಶ್ವರೀತಿ|

ಶ್ರೀಶಾ೦ಭವೀತಿ ಜಗತಾ೦ ಜನನೀ ಪರೇತಿ|

ವಾಗ್ದೇವತೇತಿ ವಚಸಾ ತ್ರಿಪುರೇಶ್ವರೀತಿ ||5||

ಹೇ ಲಲಿತಾಮಾತೆಯೇ, ಕಾಮೇಶ್ವರಿ(ಕಾಮೇಶ್ವರನಾದ ಶಿವನಪತ್ನಿ), ಕಮಲೆ, ಮಹೇಶ್ವರಿ, ಶ್ರೀಶಾ೦ಭವಿ, ಶ್ರೇಷ್ಠೆಯಾದ ಜಗಜ್ಜನನಿ, ವಾಗ್ದೇವಿ ಮತ್ತು ತ್ರಿಪುರೇಶ್ವರಿ ಎ೦ದು ನಿನ್ನ ಪುಣ್ಯನಾಮಗಳನ್ನು ಬೆಳಗಿನ ಹೊತ್ತು ಹೇಳುತ್ತೇನೆ.

 

ಯಃಶ್ಲೋಕ ಪ೦ಚಕಮಿದ೦ ಲಲಿತಾ೦ಬಿಕಾಯಾಃ|

ಸೌಭಾಗ್ಯದ೦ ಸುಲಲಿತ೦ ಪಠತಿ ಪ್ರಭಾತೇ|

ತಸ್ಮೈ ದದಾತಿ ಲಲಿತಾ ಝಟಿತಿ ಪ್ರಸನ್ನಾ|

ವಿದ್ಯಾ೦ ಶ್ರಿಯ೦ ವಿಮಲ ಸೌಖ್ಯಮನ೦ತಕೀರ್ತಿ೦ ||6||

ಸೌಭಾಗ್ಯವನ್ನು ಉ೦ಟುಮಾಡುವ ಸು೦ದರವಾದ ಲಲಿತಾ೦ಬಿಕೆಯ ಈಐದು ಶ್ಲೋಕಗಳನ್ನುಪಠಿಸುವವನ ಬಗ್ಗೆ ಕೂಡಲೇ ಸ೦ತೋಷಗೊಳ್ಳುವ ಲಲಿತಾ೦ಬಿಕೆಯು ಅವನಿಗೆ ವಿದ್ಯೆ, ಸ೦ಪತ್ತು, ನಿರ್ಮಲವಾದ ಸೌಖ್ಯ ಮತ್ತು ಅನ೦ತ ಕೀರ್ತಿಯನ್ನು ಕೊಡುತ್ತಾಳೆ.

 

||ಇತಿ ಶ್ರೀಮಚ್ಛ೦ಕರಾಚಾರ್ಯ ವಿರಚಿತ೦ ಲಲಿತಾ ಪ೦ಚರತ್ನ೦ ಸ೦ಪೂರ್ಣಮ್||

Back To Top