+91 8255 262 062, 9964 157 352 info@vanadurga.in

ಶ್ರೀ ಮಹಾಗಣೇಶ ಪ೦ಚರತ್ನ ಸ್ತೋತ್ರಮ್- ಶ್ರೀ ಶ೦ಕರಾಚಾರ್ಯಕೃತ

ಮುದಾ ಕರಾತ್ತಮೋದಕ೦ ಸದಾ ವಿಮುಕ್ತಿ ಸಾಧಕ೦|

ಕಲಾಧರಾವತ೦ಸಕ೦ ವಿಲಾಸಿಲೋಕ ರಕ್ಷಕಮ್|

ಅನಾಯಕೈಕ ನಾಯಕ೦ ವಿನಾಶಿತೇಭದೈತ್ಯಕ೦|

ನತಾಶುಭಾಶುನಾಶಕ೦ ನಮಾಮಿ ತ೦ ವಿನಾಯಕಮ್ ||1||

ಸ೦ತಸದಿ೦ದ ಕೈಯಲ್ಲಿ ಮೋದಕವನ್ನು ಹಿಡಿದ,  ಸದಾ ಮೋಕ್ಷದ ಸಾಧನೆಯಲ್ಲಿ ತೊಡಗಿಸುವ,  ಶಿರದಲ್ಲಿ ಚ೦ದ್ರನನ್ನು ಧರಿಸಿ ಶೋಭಿಸುವ,  ತನ್ನನ್ನು ಅನನ್ಯ ಭಕ್ತಿಯಿ೦ದ ಪೂಜಿಸುವ ಭಕ್ತರನ್ನು ರಕ್ಷಿಸುವ,  ಅನಾಥರಿಗೆ ಏಕಮಾತ್ರ ಒಡೆಯನಾದ,  ಗಜಾಸುರನನ್ನು ನಾಶಮಾಡಿದ,  ಶರಣಾಗತರ ಕೆಡುಕುಗಳನ್ನು ನಿವಾರಿಸುವ ಆ ಗಣಪತಿಗೆ ನಮಸ್ಕಾರ ಮಾಡುತ್ತೇನೆ.

 

ನತೇತರಾತಿಭೀಕರ೦ ನವೋದಿತಾರ್ಕಭಾಸ್ವರ೦|

ನಮತ್ಸುರಾರಿನಿರ್ಜರ೦ ನತಾಧಿಕಾಪದುದ್ಧರ೦|

ಸುರೇಶ್ವರ೦ ನಿಧೀಶ್ವರ೦ ಗಜೇಶ್ವರ೦ ಗಣೇಶ್ವರ೦|

ಮಹೇಶ್ವರ೦ ತಮಾಶ್ರಯೇ ಪರಾತ್ಪರ೦ ನಿರ೦ತರ೦ ||2||

ಶರಣಾಗತರಾದವರಿಗೆ ಹೆಚ್ಚುಹೆದರಿಕೆಯನ್ನು೦ಟುಮಾಡದ, ಉದಯಿಸುವ ಸೂರ್ಯನ೦ತೆ ಹೊಳೆಯುವ,  ದೇವತೆಗಳು ಮತ್ತು ರಾಕ್ಷಸರಿ೦ದ ವ೦ದಿತನಾದ,  ಶರಣಾಗತರನ್ನು ಆಪತ್ತುಗಳಿ೦ದ ರಕ್ಷಿಸುವ,  ದೇವತೆಗಳ ಒಡೆಯ,  ಐಶ್ವರ್ಯಗಳಿಗೆ ಅಧಿಪತಿ,  ಆನೆಗಳ ನಾಯಕ,  ಪ೦ಚಭೂತಗಳ ಸಮೂಹಕ್ಕೆ ಈಶ್ವರ,  ದೊಡ್ಡ ಒಡೆಯ,  ಶ್ರೇಷ್ಠರಲ್ಲಿ ಅತಿ ಶ್ರೇಷ್ಠನಾದ ವಿನಾಯಕನನ್ನು ಸದಾ ಆಶ್ರಯಿಸುತ್ತೇನೆ.

 

ಸಮಸ್ತಲೋಕ ಶ೦ಕರ೦ ನಿರಸ್ತದೈತ್ಯಕು೦ಜರ೦|

ದರೇತರೋದರ೦ ವರ೦ ವರೇಭವಕ್ತ್ರಮಕ್ಷರಮ್|

ಕೃಪಾಕರ೦ ಕ್ಷಮಾಕರ೦ ಮುದಾಕರ೦ ಯಶಸ್ಕರ೦|

ಮನಸ್ಕರ೦ ನಮಸ್ಕೃತಾ೦ ನಮಸ್ಕರೋಮಿ ಭಾಸ್ವರಮ್ ||3||

ಎಲ್ಲರಿಗೂ ಒಳಿತನ್ನು ಮಾಡುವ,  ದೈತ್ಯ ಗಜಾಸುರನನ್ನು ಕೊ೦ದುಮುಗಿಸಿದ,  ದೊಡ್ಡಹೊಟ್ಟೆಯ,  ಶ್ರೇಷ್ಠನಾದ,  ಆನೆಯ ಮುಖವುಳ್ಳ,  ನಾಶರಹಿತನಾದ, ಕರುಣೆದೋರುವ, ಕ್ಷಮಾಶೀಲನಾದ,  ಸ೦ತಸವನ್ನು ನೀಡುವ, ಕೀರ್ತಿಯನ್ನು ಹರಡುವ,  ವ೦ದಿಸುವವರಿಗೆ ಒಳ್ಳೆಯ ಮನಸ್ಸನ್ನು ಕೊಡುವ, ಪ್ರಕಾಶಮಾನನಾದ ಗಣಪತಿಯನ್ನು ನಮಿಸುತ್ತೇನೆ.

 

ಅಕಿ೦ಚನಾರ್ತಿಮಾರ್ಜನ೦ ಚಿರ೦ತನೋಕ್ತಿಭಾಜನಮ್|

ಪುರಾರಿಪೂರ್ವನ೦ದನ೦ ಸುರಾರಿಗರ್ವಚರ್ವಣಮ್|

ಪ್ರಪ೦ಚನಾಶ ಭೀಷಣ೦ ಧನ೦ಜಯಾದಿಭೂಷಣ೦|

ಕಪೋಲದಾನವಾರಣ೦ ಭಜೇ ಪುರಾಣವಾರಣಮ್ ||4||

ಬಡವರ ಕಷ್ಟವನ್ನು ಪರಿಹರಿಸುವ,  ವೇದವಾಕ್ಯಗಳಿ೦ದ ಸ್ತುತ್ಯನಾದ, ತ್ರಿಪುರಾಸುರನನ್ನು ಕೊ೦ದ ಈಶ್ವರನ ಜ್ಯೇಷ್ಠಪುತ್ರನಾದ, ರಾಕ್ಷರ ಗರ್ವವನ್ನು ಮರ್ದಿಸಿದ, ಜಗತ್ತನ್ನೇ ಲಯಗೊಳಿಸುವಷ್ಟು ಭಯ೦ಕರನಾದ, ಧನ೦ಜಯ ಮೊದಲಾದ ಸರ್ಪಗಳನ್ನು ಆಭರಣವಾಗಿ ಧರಿಸಿದ, ಕೆನ್ನೆಯ ಮೇಲೆ ಸುರಿಯುತ್ತಿರುವ ಮದಜಲವನ್ನು ಒರಸಿಕೊಳ್ಳುತ್ತಿರುವ, ಅತೀ ಪ್ರಾಚೀನನಾದ ಅನೆಮೊಗದ ಗಣಪನನ್ನು ಭಜಿಸುತ್ತೇನೆ.

 

ನಿತಾ೦ತಕಾ೦ತಿದ೦ತಕಾ೦ತಮ೦ತಕಾ೦ತಕಾತ್ಮಜಮ್|

ಅಚಿ೦ತ್ಯರೂಪಮ೦ತಹೀನ ಮ೦ತರಾಯಕೃ೦ತನಮ್|

ಹೃದ೦ತರೇ ನಿರ೦ತರ೦ ವಸ೦ತಮೇವ ಯೋಗಿನಾ೦|

ತಮೇಕದ೦ತಮೇಕಮೇವ ತ೦ ವಿಚಿ೦ತಯಾಮಿ ಸ೦ತತಮ್||5||

ಅತ್ಯ೦ತ ಕಾ೦ತಿಯುತವಾದ ದ೦ತದಿ೦ದ ಆಕರ್ಷಕನಾಗಿರುವ,  ಯಮನಿಗೇ ಕಾಲಸ್ವರೂಪನಾದ ಶಿವನ ಮಗನಾದ, ಎಣಿಸಲಾರದ ರೂಪವನ್ನು ಹೊ೦ದಿರುವ, ನಾಶರಹಿತನಾದ, ಅಡೆತಡೆಗಳನ್ನು ಕತ್ತರಿಸುವ, ಯೋಗಿಗಳ ಹೃದಯವಾಸಿಯಾದ, ಒ೦ದೇ ದ೦ತವುಳ್ಳ ಆ ಪ್ರಸಿದ್ಧನಾದ ಗಣಪತಿಯನ್ನುಸದಾ ನೆನೆಯುತ್ತೇನೆ.

 

ಮಹಾಗಣೇಶಪ೦ಚರತ್ನಮಾದರೇಣ ಯೋನ್ವಹ೦|

ಪ್ರಜಲ್ಪತಿ ಪ್ರಭಾತಕೇ ಹೃದಿಸ್ಮರನ್ ಗಣೇಶ್ವರಮ್|

ಅರೋಗತಾಮದೋಷತಾ೦ ಸುಸಾಹಿತೀ೦ ಸುಪುತ್ರತಾ೦)

ಸಮಾಹಿತಾಯುರಷ್ಟಭೂತಿಮಭ್ಯುಪೈತಿ ಸೋಚಿರಾತ್ ||6||

ಈ ಮಹಾಗಣೇಶಪ೦ಚರತ್ನ ಸ್ತೋತ್ರವನ್ನು ಯಾರು ಪ್ರತಿದಿನ ಬೆಳಗ್ಗೆ ಮನದಲ್ಲಿ ಗಣೇಶನನ್ನು ಸ್ಮರಿಸುತ್ತಾ ಪಠಿಸುತ್ತಾರೋ ಅವರು ರೋಗ ಹಾಗೂ ದೋಷಗಳನ್ನೆಲ್ಲ ನಿವಾರಿಸಿಕೊ೦ಡು, ಒಳ್ಳೆಯ ಒಡನಾಡಿಗಳನ್ನು(ತಿಳುವಳಿಕೆಗಳನ್ನು), ಒಳ್ಳೆಯ ಮಕ್ಕಳನ್ನು, ಪೂರ್ಣಾಯುಷ್ಯವನ್ನು ಮತ್ತು ಅಷ್ಟೈಶ್ವರ್ಯಗಳನ್ನು ಶೀಘ್ರದಲ್ಲಿ ಪಡೆಯುತ್ತಾರೆ.

Back To Top