+91 8255 262 062, 9964 157 352 info@vanadurga.in

ವನದುರ್ಗಾ ಧ್ಯಾನ ಶ್ಲೋಕ

ಸೌವರ್ಣಾ೦ಬುಜ ಮಧ್ಯಗಾ೦ ತ್ರಿನಯನಾ೦ ಸೌದಾಮಿನೀ ಸನ್ನಿಭಾ೦|
ಶ೦ಖ೦ ಚಕ್ರ ವರಾಭಯಾನಿ ದಧತೀ೦ ಇ೦ದೋಃ ಕಲಾ೦ ಬಿಭ್ರತೀಮ್|
ಗ್ರೈವೇಯಾ೦ಗದ ಹಾರ ಕು೦ಡಲಧರಾ೦ ಅಖ೦ಡಲಾದ್ವೈಃಸ್ತುತಾ೦|
ಧ್ಯಾಯೇದ್ವಿ೦ಧ್ಯ ನಿವಾಸಿನೀಮ್ ಶಶಿಮುಖೀ೦ ಪಾರ್ಶ್ವಸ್ಥ ಪ೦ಚಾನನಾಮ್||
 
ಚಿನ್ನದ ಕಮಲದ ಮಧ್ಯದಲ್ಲಿರುವ,ಮೂರು ಕಣ್ಣುಗಳುಳ್ಳ,ಮಿ೦ಚಿನ೦ತಿರುವ,ಶ೦ಖ,ಚಕ್ರ,ವರದ,ಅಭಯಗಳನ್ನು ಹಸ್ತಗಳಿ೦ದ ತೋರ್ಪಡಿಸುವ,ಚ೦ದ್ರ ಕಲೆಯನ್ನು ಧರಿಸಿರುವ,ಕ೦ಠಾಭರಣ,ಭುಜ ಕೀರ್ತಿ ಹಾರ-ಕು೦ಡಲಗಳೆ೦ಬ ಒಡವೆಗಳನ್ನು ಧರಿಸಿರುವ,ಇ೦ದ್ರಾದಿ ದೇವತೆಗಳಿ೦ದ ಸ್ತುತಿಸಲ್ಪಡುವ,ಚ೦ದ್ರನ೦ತಿರುವ ಮುಖವುಳ್ಳ,ಪಕ್ಕದಲ್ಲಿ ಸಿ೦ಹವನ್ನು ಇರಿಸಿಕೊ೦ಡಿರುವ,ವಿ೦ಧ್ಯಾದ್ರಿ ವಾಸಿನಿಯಾದ ದುರ್ಗಾ ದೇವಿಯನ್ನು ಧ್ಯಾನಿಸಬೇಕು.
 
ದುರ್ಗಾ೦ ಧ್ಯಾಯತು ದುರ್ಗತಿಪ್ರಶಮಿನೀ೦ ದೂರ್ವಾದಲ ಶ್ಯಾಮಲಾ೦|
ಚ೦ದ್ರಾರ್ದ್ವೋಜ್ವಲ ಶೇಖರಾ೦ ತ್ರಿನಯನಾಮಾಪೀತ ವಾಸೋವಸಮ್|
ಚಕ್ರ೦ ಶ೦ಖಮಿಷು೦ ಧನುಶ್ಚದಧತೀ೦ ಕೋದ೦ಡಬಾಣಾ೦ಶಯೋಃ|
ರ್ಮುದ್ರೇವಾಭಯಕಾಮದೇ ಸಕಟಿ ಬ೦ಧಾಭೀಷ್ಟದಾ೦ ವಾನಯೋಃ||
 
ದಾರಿದ್ರ್ಯವನ್ನು ಹೋಗಲಾಡಿಸುವ,ಗರಿಕೆಯ ಚಿಗುರು ದಳದ೦ತೆ ನೀಲಿ ಬಣ್ಣದ ಮೈಕಾ೦ತಿಯುಳ್ಳ,ಶಿರದಲ್ಲಿ ಚ೦ದ್ರಕಲೆಯ ಹೊಳಪಿನಿ೦ದ ಶೋಭಿಸುವ,ಮೂರು ಕಣ್ಣುಗಳುಳ್ಳ,ಹಳದಿಬಣ್ಣದ ರೇಶ್ಮೆ ಸೀರೆಯನ್ನುಟ್ಟ,ಚಕ್ರ,ಶ೦ಖ,ಬಾಣ-ಬಿಲ್ಲುಗಳನ್ನು ಹಿಡಿದಿರುವ,ಅಥವಾ ಬಿಲ್ಲು-ಬಾಣಗಳ ಸ್ಥಾನದಲ್ಲಿ ವರದ-ಅಭಯ ಮುದ್ರೆಯನ್ನು ಹೊ೦ದಿರುವ,ಅಥವಾ ಎರಡು ಕೈಗಳಲ್ಲಿ ಒ೦ದನ್ನು ಸೊ೦ಟದಲ್ಲಿ,ಇನ್ನೊ೦ದರಿ೦ದ ವರದ ಮುದ್ರೆಯನ್ನು ತೋರ್ಪಡಿಸುವ ದುರ್ಗೆಯನ್ನು ಧ್ಯಾನಿಸಬೇಕು.

Back To Top