+91 8255 262 062, 9964 157 352 info@vanadurga.in

ದುರ್ಗಾ – ಶಬ್ದಾರ್ಥ ವಿವರಣೆ

ದುರ್ಗಾ ಶಬ್ದಾರ್ಥ :ದುರ್ಗಾ ಶಬ್ದದಲ್ಲಿ ’ದ’ಕಾರ, ’ಉ’ಕಾರ, ’ರ’ಕಾರ, ’ಗ’ಕಾರ ಮತ್ತು ’ಅ’ಕಾರ ಗಳು ಸೇರಿವೆ. ಈ ಪ್ರತಿಯೊಂದು ಅಕ್ಷರಕ್ಕೂ ವಿಶಿಷ್ಟವಾದ ಅರ್ಥಗಳಿವೆ.

ದೈತ್ಯ ನಾಶಾರ್ಥ ವಚನೋ ದಕಾರಃ ಪರಿಕೀರ್ತಿತಃ |
ಉಕಾರೋ ವಿಘ್ನ ನಾಶಸ್ಯ ವಾಚಕೋ ವೇದ ಸಮ್ಮತಃ |
ರೆಫೋ ರೋಗಘ್ನ ವಚನೋ ಗಶ್ಚ ಪಾಪಘ್ನ ವಾಚಕಃ |
ಭಯ ಶತ್ರುಘ್ನ ವಚನ ಶ್ಚಾಕಾರ:ಪರಿಕೀರ್ತಿತಃ |
ದಕಾರ -ದೈತ್ಯ ನಾಶಕ ,ಉಕಾರ -ವಿಘ್ನ ನಾಶಕ ,ರಕಾರ -ರೋಗ ನಿವಾರಕ ,ಗಕಾರ -ಪಾಪ ನಾಶಕ ಮತ್ತು ಅಕಾರ -ಭಯ ,ಶತ್ರು ನಿವಾರಕ .

ಪ್ರಾತ :ಕಾಲದಲ್ಲಿ ಪ್ರತಿದಿನವೂ ದುರ್ಗಾ, ದುರ್ಗಾ ಎಂದು ಜಪಿಸಿದಾಗ (೧೦೮ಬಾರಿ )ಸಮಸ್ತ ವಿಪತ್ತು ಗಳು ,ದುಷ್ಟ ಶಕ್ತಿಗಳು ನಾಶವಾಗುವು . ಸರ್ವ ವ್ಯಾಪಕವಾದ ಮಹಾ ಶಕ್ತಿ ಯೇ ದುರ್ಗಾ .

ಚಂಡೀ -ಎಂದರೆ ಕ್ರೋಧ ವುಳ್ಳವಳು ಎಂದರ್ಥ .ಚಂಡ-ಮಿತಿಗೆ ನಿಲುಕದ ,ಅಪರಿಮಿತವಾದ .ಚಂಡೀ ನಾಮ ಪರಬ್ರಹ್ಮ ಣ: ಪಟ್ಟ ಮಹಿಷೀದೇವತಾ -ಪರಬ್ರಹ್ಮನ ಮಹಿಷೀ ,ಪರಬ್ರಹ್ಮನ ಶಕ್ತಿ -ಬ್ರಹ್ಮಾಂಡ ದ ವಿರಾಟ್ ಶಕ್ತಿ .ವಿಶ್ವ ನಿಯಂತ್ರಣ ಕ್ಕೆ ಬೇಕಾದ ಸಮಷ್ಟಿ ಶಕ್ತಿ ಸ್ವರೂಪಿಣಿಚಂಡಿಕಾ .
ವಿಶ್ವ ನಿಯಂತ್ರಣ ಕ್ಕೆ ದಯೆ ,ಸ್ನೇಹ ,ಮಮತೆ ಆದಿ ಕೋಮಲ ಶಕ್ತಿ ಗಳಂತೆ ಅಸುರೀ ಶಕ್ತಿ ಗಳ ನಿಯಂತ್ರಣ ಕ್ಕೆ ಕ್ರೋಧ ಬೇಕು .ವಿಶ್ವ ರಕ್ಷಣೆಗೆ ಬೇಕಾದ ಈ ಎರಡೂ ಶಕ್ತಿಗಳು ಅವಳಲ್ಲಿವೆ .ದುಷ್ಟ ನಿಗ್ರಹಕ್ಕೆ ಅವಳು ಪ್ರಚಂಡ ರೂಪ ತಾಳುವಳು .

Back To Top