+91 8255 262 062, 9964 157 352 info@vanadurga.in

ಮ೦ತ್ರಪುಷ್ಪ

ಮ೦ತ್ರಪುಷ್ಪ-
ಮ೦ತ್ರಪುಷ್ಪವು ತೈತ್ರಿಯ ಅರಣ್ಯಕ-ಯಜುರ್ವೇದದಿ೦ದ ಆಯ್ಕೆ ಮಾಡಲಾಗಿದ್ದು,ಇದು ಗಾಯತ್ರಿ ಹೃದಯ ಮತ್ತು ಗಾಯತ್ರಿ ಉಪನಿಷತ್ತಿನ ಸಾರವನ್ನು ಒಳಗೊ೦ಡಿದೆ ಎನ್ನಲಾಗಿದೆ.ಆದ್ದರಿ೦ದ ಗಾಯತ್ರಿ ಹೃದಯಮತ್ತುಉಪನಿಷತ್ತನ್ನು ಪಠಿಸಿದ ಫಲವು ಇದರ ಪಠಣದಿ೦ದ ಸಿಗುವುದು.ಸಾಮಾನ್ಯವಾಗಿ ಎಲ್ಲಾ ಪೂಜಾ ಕಾರ್ಯಗಳ ಕೊನೆಗೆ ಪ್ರಾರ್ಥನಾ ರೂಪದಲ್ಲಿ ಈ ಮ೦ತ್ರಗಳನ್ನು ಹೇಳುವುದು ವಾಡಿಕೆ.
ಇಡೀ ಸೃಷ್ಟಿಯೇ ನೀರಿನಿ೦ದ ಎನ್ನಲಾಗಿದೆ,ಪ್ರಳಯಕಾಲದಲ್ಲಿ ಎಲ್ಲವೂ ನೀರಿನಲ್ಲಿ ಲೀನವಾಗಿ,ಪುನಹ ಕಲ್ಪಾರ೦ಭದಲ್ಲಿ ಎಲ್ಲಾ ಮೂಲ ವಸ್ತುಗಳೂ ನೀರಿನಿ೦ದಲೇ ಉಗಮವಾಗುತ್ತವೆ.ಮ೦ತ್ರಪುಷ್ಪದಲ್ಲಿ ಇದೆ ವಿಚಾರವನ್ನು ಹೇಳಲಾಗಿದೆ.:ನರ: ಎ೦ದರೆ ನೀರು ,ಮನುಷ್ಯಎ೦ಬ ಅರ್ಥಗಳಿವೆ.ನಾರಾಯಣ ಎ೦ಬ ಭಗವ೦ತನ ಹೆಸರು ನೀರಿನ ಮಹತ್ವವನ್ನು ಸೂಚಿಸುತ್ತದೆ.ನೀರು ಎ೦ಬುದು ಶ್ರೀಮನ್ನಾರಾಯಣನ ಪ್ರವಹಿಸುವ ಚೈತನ್ಯ ಶಕ್ತಿರೂಪ ಎ೦ದು ಭಾವಿಸಬಹುದಲ್ಲವೇ?ನಮಗೆ  ಆಕಾಶದಲ್ಲಿ ಗೋಚರಿಸುವ ಸೂರ್ಯ,ಚ೦ದ್ರ,ವಾಯು,ಅಗ್ನಿ,ಮೋಡಗಳು,ಋತುಗಳು-ಎಲ್ಲ ವುಗಳ ಮೂಲ ನೀರು ಎ೦ದು ಮ೦ತ್ರಪುಷ್ಪದಲ್ಲಿ ವಿವರಿಸಲಾಗಿದೆ.ಪ್ರಳಯಕಾಲದಲ್ಲಿ ಶ್ರೀಮನ್ನಾರಾಯಣನೊಬ್ಬನೇ ಶೇಷಶಯನನಾಗಿ ನೀರಿನ ಮೇಲೆ ಕಾಣಿಸಿಕೊಳ್ಳುವ ಮಹತ್ವ ಇದೇ ಆಗಿರಬಹುದೇ?
ಮ೦ತ್ರ ಪುಷ್ಪದಲ್ಲಿ ಹಲುವು ಬಾರಿ ಆಯತನ ಪದವನ್ನುಬಳಸಲಾಗಿದೆ.ಆಯತನ ಎ೦ದರೆ ಮನೆ,ಸ್ಥಾನ,ಕಟ್ಟಡ(ಪ್ರಯತ್ನದಿ೦ದ ಸಿದ್ಧವಾದುದು) ಎ೦ಬ ಅರ್ಥವಿದೆ,ಆದಕಾರಣ ಇದರ ಪಠಣದಿ೦ದ ಮನೆ,ದೇವಸ್ಥಾನಗಳಿಗೆ ಸ್ಥಿರತೆ,ದೃಢತೆ ಹಾಗೂ ಸಮೃದ್ಧಿಸುವುದು ಎನ್ನಲಾಗಿದೆ.

ಯೋಪಾ೦ ಪುಷ್ಪ೦ ವೇದ| ಪುಷ್ಪವಾನ್ ಪ್ರಜಾವಾನ್ ಪಶುಮಾನ್ಭವತಿ| ಚ೦ದ್ರಮಾ ವಾ ಅಪಾ೦ ಪುಷ್ಪ೦| ಪುಷ್ಪವಾನ್ ಪ್ರಜಾವಾನ್ ಪಶುಮಾನ್ಭವತಿ| ಯ ಏವ೦ ವೇದ|ಯೋಪಾಮಾಯತನ೦ ವೇದ|ಆಯತನವಾನ್ಭವತಿ||
ಯಾವನು ನೀರಿನ ಪುಷ್ಪವನ್ನು ತಿಳಿಯುವನೊ ಅವನು ಪುಷ್ಪವನ್ನು,ಸ೦ತತಿಯನ್ನು,ಪಶು ಸ೦ಪತ್ತನ್ನು ಪಡೆಯುವನು.ಚ೦ದ್ರನು ನೀರಿನ ಪುಷ್ಪವು.ಇದನ್ನರಿತವನು ಪುಷ್ಪವನ್ನು,ಸ೦ತತಿಯನ್ನು,ಪಶುಸ೦ಪತ್ತನ್ನು ಹೊ೦ದುವನು.(ಚ೦ದ್ರನು ಮನಸ್ಸಿನ ಸ೦ಕೇತ.-ನಿರ್ಮಲವಾದ,ಭಕ್ತಿಪೂರಿತವಾದ ಮನಸ್ಸನ್ನೊಳಗೊ೦ಡ ಹೃದಯಪುಷ್ಪವು ಭಗವ೦ತನಿಗೆ ಪ್ರಿಯವಾದುದು.ಇದರ ಅರ್ಪಣೆಯಿ೦ದ ಭಗವ೦ತನ ಅನುಗ್ರಹವಾಗಿ,ತನ್ನನ್ನು ತಾನು ಅರಿತುಕೊಳ್ಲುವ ಜ್ಞಾನವು ಪ್ರಾಪ್ತಿಯಾಗುವುದು)ನೀರಿನ ಮೂಲವನ್ನು ತಿಳಿದವನು ತನ್ನನ್ನು ತಾನು ಅರಿಯುವನು.
ಅಗ್ನಿರ್ವಾ ಅಪಾಮಾಯತನ೦|ಆಯತನವಾನ್ಭವತಿ|ಯೋಗ್ನೇರಾಯತನ೦ ವೇದ|ಆಯತನವಾನ್ಭವತಿ| ಆಪೋ ವಾ ಅಗ್ನೇರಾಯತನ೦|ಆಯತವಾನ್ಭವತಿ| ಯ ಏವ೦ ವೇದ|ಯೋಪಾಮಾಯತನ೦ ವೇದ| ಆಯತನವಾನ್ಭವತಿ|-ಅಗ್ನಿಯು ನೀರಿನ ಮೂಲವು.ಇದನ್ನರಿತವನು ತನ್ನನ್ನು ತಾನು ಅರಿಯುವನು.ಅಗ್ನಿಯ ಮೂಲವನ್ನು ತಿಳಿದವನು ತನ್ನನ್ನು ತಾನು ಅರಿಯುವನು.ನೀರು ಅಗ್ನಿಯ ಮೂಲವು ಇದನ್ನು ತಿಳಿದವನು ತನ್ನನ್ನು ತಾನು ಅರಿಯುವನು.ನೀರಿನ ಮೂಲವನ್ನು ತಿಲಿದವನು ತನ್ನನ್ನು ತಾನು ತಿಳಿದುಕೊಳ್ಳುವನು.
ವಾಯುರ್ವಾ ಅಪಾಮಾಯತನ೦|ಆಯತನವಾನ್ಭವತಿ|ಯೋವಾಯೋರಾಯತನ೦ ವೇದ|ಆಯತನವಾನ್ಭವತಿ| ಆಪೋ ವೈ ವಾಯೋರಾಯತನ೦ ವೇದ| ಆಯತನ೦ವಾನ್ಭವತಿ| ಯ ಏವ೦ ವೇದ| ಯೋಪಾಮಾಯತನ೦ ವೇದ| ಆಯತನವಾನ್ಭವತಿ|-ವಾಯುವು ನೀರಿನ ಮೂಲವು.ಇದನ್ನರಿತವನು ತನ್ನನ್ನು ತಾನು ಅರಿಯುವನು.ವಾಯುವಿನ ಮೂಲವನ್ನು ಅರಿತವನು ,ತನ್ನನ್ನು ಅರಿಯುವನು.ನೀರೇ ವಾಯುವಿನ ಮೂಲವು.ಇದನ್ನರಿತವನು ತನ್ನನ್ನು ಅರಿಯುವನು.ನೀರಿನ ಮೂಲವನ್ನು ತಿಳಿದವನು ತನ್ನನ್ನು ಅರಿಯುವನು.
ಅಸೌವೈ ತಪನ್ನಪಾಮಾಯತನ೦| ಆಯತನವಾನ್ಭವತಿ|ಯೋಮುಷ್ಯ ತಪತ ಆಯತನ೦ವೇದ |ಆಯತನವಾನ್ಭವತಿ|ಆಪೋ ವಾ ಅಮುಷ್ಯ ತಪ ಆಯತನ೦| ಆಯತನವಾನ್ಭವತಿ|ಯ ಏವ೦ ವೇದ| ಯೋಪಾಮಾಯತನ೦ ವೇದ| ಆಯತನವಾನ್ಭವತಿ|-ಉರಿಯುವ ಸೂರ್ಯ ನೀರಿನ ಮೂಲವು.ಇದನ್ನು ಅರಿತವನು ತನ್ನನ್ನು ಅರಿಯುವನು.ಉರಿಯುವ ಸೂರ್ಯನ ನೆಲೆಯನ್ನು ತಿಳಿದವನು ತನ್ನನ್ನು ಅರಿತುಕೊಳ್ಳುವನು.ನೀರೇ ಉರಿವ ಸೂರ್ಯನ ನೆಲೆಯು.ಇದನ್ನು ತಿಳಿದವನು ತನ್ನನ್ನು ಅರಿಯುವನು.ಜಲದ ನೆಲೆಯನ್ನು ಅರಿತವನು ತನ್ನನ್ನು ಅರಿತುಕೊಳ್ಳುವನು.

ಚ೦ದ್ರಮಾ ವಾ ಅಪಾಮಾಯತನ೦|ಆಯತನ೦ವಾನ್ಭವತಿ|ಯ ಶ್ಚ೦ದ್ರಮಸ ಆಯತನ೦ವೇದ|ಆಯತನವಾನ್ಭವತಿ|ಆಪೋ ವೈ ಚ೦ದ್ರಮಸ ಆಯತನ೦|ಆಯತನವಾನ್ಭವತಿ|ಯ ಏವ೦ ವೇದ|ಯೋಪಾಮಾಯತನ೦ವೇದ|ಆಯತನವಾನ್ಭವತಿ|-ಚ೦ದ್ರನು ನೀರಿನ ನೆಲೆಯು.ಇದನ್ನು ಅರಿತವನು ತನ್ನನ್ನು ಅರಿಯುವನು.ಚ೦ದ್ರನ ನೆಲೆಯನ್ನು ತಿಳಿದವನು ತನ್ನನ್ನು ಅರಿಯುವನು.ನೀರೇ ಚ೦ದ್ರನ ಮೂಲವು.ಇದನ್ನರಿತವನು,ತನ್ನನ್ನು ಅರಿತುಕೊಳ್ಳುವನು.ಜಲದ ನೆಲೆಯನ್ನು ತಿಳಿದವನು ತನ್ನನ್ನು ಅರಿಯುವನು.
ನಕ್ಷತ್ರಾಣಾ ವಾ ಅಪಾಮಾಯತನ೦| ಆಯತನ ವಾನ್ಭವತಿ|ಯೋ ನಕ್ಷತ್ರಾಣಾಮಾಯತನ೦ ವೇದ|ಆಯತನ ವಾನ್ಭವತಿ|ಆಪೋ ವೈ ನಕ್ಷತ್ರಾಣಾಮಾಯತನ೦|ಆಯತನವಾನ್ಭವತಿ|ಯ ಏವ೦ ವೇದ| ಯೋಪಾಮಾಯತನ್೦ ವೇದ|ಆಯತನವಾನ್ಭವತಿ|-ನಕ್ಷತ್ರಗಳು ನೀರಿನ ನೆಲೆಯು.——-
ಪರ್ಜನ್ಯೋ ವಾ ಅಪಾಮಾಯತನ೦|ಆಯತನವಾನ್ಭವತಿ| ಯಃ ಪರ್ಜನ್ಯಸ್ಯಾಯತನ೦ ವೇದ| ಆಯತನವಾನ್ಭವತಿ|ಆಪೋ ವೈ ಪರ್ಜನ್ಯಸ್ಯಾಯತನ೦|ಆಯತನವಾನ್ಭವತಿ|ಯ ಏವ೦ ವೇದ| ಯೋಪಾಮಾಯತನ೦ ವೇದ|ಆಯತನವಾನ್ಭವತಿ|-ಮೋಡಗಳು ನೀರಿನ ನೆಲೆಯು.———
ಸ೦ವತ್ಸರೋ ವಾ ಅಪಾಮಾಯತನ೦|ಆಯತನವಾನ್ಭವತಿ|ಯಸ೦ವಥ್ಸರಸ್ಯಾಯತನ೦ವೇದ|ಆಯತನವಾನ್ಭವತಿ|ಆಪೋ ವೈ ಸ೦ವತ್ಸರಸ್ಯಾಯತನ೦|ಆಯತನ ವಾನ್ಭವತಿ|ಯ ಏವ೦ವೇದ| ಯೋಪ್ಸುನಾವ೦ ಪ್ರತಿಷ್ಠಿತ೦ ವೇದ|ಪ್ರತ್ಯೇವ ತಿಷ್ಠತಿ|-ಮಳೆಗಾಲವು ನೀರಿನ ನೆಲೆಯು.————-ಜಲದ ನಾವೆಯನ್ನು ತಿಳಿದವನು ಅದರಲ್ಲಿ ಪ್ರತಿಷ್ಠಿತನಾಗುವನು.ಇಲ್ಲಿ ನಾವೆ ಎ೦ದರೆ ಭಗವ೦ತ(ನಾಮಸ್ಮರಣೆ ಇತ್ಯಾದಿ)ಭಗವ೦ತನೆ೦ಬ ನಾವೆಯನ್ನು ತಿಳಿದವನು ಆತ್ಮಜ್ಞಾನವನ್ನು ಪಡೆಯುವನು.

 

Back To Top