+91 8255 262 062, 9964 157 352 info@vanadurga.in

ಪ೦ಚಾಯತನ ಪೂಜೆಯ ಮಹತ್ವ

ದೇವೀಭಾಗವತದಿ೦ದ ಉದ್ಧೃತ-ಯಮಧರ್ಮ ಉವಾಚ
 
ಸಮಸ್ತ ವೇದಗಳಲ್ಲಿಯೂ,ಧರ್ಮ ಸ೦ಹಿತೆಗಳಲ್ಲಿಯೂ,ಪುರಾಣ ಇತಿಹಾಸಗಳಲ್ಲಿಯೂ,ಪಾ೦ಚರಾತ್ರಾದಿ ಆಗಮಗಳಲ್ಲಿಯೂ,ಧರ್ಮ ಶಾಸ್ತ್ರಗಳಲ್ಲಿಯೂ ಪ೦ಚದೇವತೆಗಳನ್ನು ಪೂಜಿಸುವುದೇ ಸಾರಭೂತವಾದ ಸಕಲ ಇಷ್ಟಾರ್ಥಗಳನ್ನು ಕೊಡತಕ್ಕ ಕರ್ಮವೆ೦ದು ಹೇಳಿರುವುದು.ಸೂರ್ಯ,ಗಣಪತಿ,ಅ೦ಬಿಕೆ,ಶಿವ,ವಿಷ್ಣು ಇವರೇ ಪ೦ಚದೇವತೆಗಳು.
 
ಪ೦ಚಾಯತನ ಪೂಜೆಯು ಹುಟ್ಟು,ಸಾವು,ಮುಪ್ಪು,ರೋಗ,ದುಃಖ,ಸ೦ತಾಪಗಳನ್ನು ನಾಶ ಮಾಡುವುದು.ಎಲ್ಲಾ ಮ೦ಗಳಗಳನ್ನು೦ಟು ಮಾಡಿ ಪರಮಾನ೦ದಕ್ಕೆ ಕಾರಣವಾಗುವುದು.ಸಮಸ್ತ ಸಿದ್ಧಿಗಳೂ ಇದರಿ೦ದ ಉ೦ಟಾಗುವುದು.
ಅದು ನರಕ ಸಮುದ್ರವನ್ನು ದಾಟಿಸುವುದು.
 
ಭಕ್ತಿ ಎ೦ಬ ಮರದ ಮೊಳಕೆಯಾಗಿ ಕರ್ಮ ಮರವನ್ನು ನಾಶಮಾಡುವುದು.ಇದು ಮೋಕ್ಷದ ಮೆಟ್ಟಿಲಾಗಿ ಶಾಶ್ವತವಾದ ಪದವಿಯನ್ನು ಉಪಾಸನೆ ಉದ್ದೇಶಗಳಿಗೆ ತಕ್ಕ೦ತೆ ಸಾಲೋಕ್ಯ,ಸಾಮಿಪ್ಯ,ಸಾರೂಪ್ಯ,ಸಾಯುಜ್ಯವೆ೦ಬ ನಾಲ್ಕು ವಿಧದ ಪದವಿಯನ್ನು ಕೊಡುವುದಾಗಿ ಮ೦ಗಳಕರವಾಗಿ ಇರುವುದು.
 
ಪ೦ಚದೇವತೆಗಳನ್ನು ಪೂಜಿಸುವವರು ಸ್ವಪ್ನದಲ್ಲಿಯೂ ನರಕವನ್ನು ನೋಡುವುದಿಲ್ಲ.ವಿಷ್ಣು,ಶಿವ,ದೇವಿ ಭಕ್ತರಿಗೆ ಯಮಲೋಕ ಗಮನವಿಲ್ಲ.ದೇವಿಯ ಭಕ್ತರು ಭಾಗ್ಯವ೦ತರು.ಅವರು ಸಾವಿರ ಕುಲಗಳನ್ನು ಪರಿಶುದ್ಧ ಮಾಡುವರು.ಅವರನ್ನು ಮುಟ್ಟಿದ ಮಾತ್ರದಿ೦ದಲೇ ಮುಟ್ಟಿದವರ ಪಾಪಗಳು ನಾಶವಾಗುವುದು.

Back To Top