+91 8255 262 062, 9964 157 352 info@vanadurga.in

ದೇವಾಲಯದ ವಾಸ್ತು-ಶೈಲಿ-ಆಕಾರ- ಪ್ರತಿಷ್ಠೆಗಳ ಬಗ್ಗೆ ಮಾಹಿತಿಗಳು

ದೇವಾಲಯದ ವಾಸ್ತುವಿನಲ್ಲಿ ಎರಡು ವಿಧಗಳಿವೆ ೧)ಉತ್ತರ ವಾಸ್ತು-ಕಾಶ್ಯಪ ವಾಸ್ತು ೨) ದಕ್ಷಿಣ ವಾಸ್ತು-ಭೃಗು ಸ೦ಹಿತೆ ವಾಸ್ತು
 
ದೇವಾಲಯದ ಕೆತ್ತನೆಗಳಲ್ಲಿ ಮೂರು ಶೈಲಿಗಳಿವೆ ೧)ನಾಗರ ಶೈಲಿ ೨)ವೇಸರ ಶೈಲಿ ೩)ದ್ರಾವಿಡ ಶೈಲಿ
 
ದೇವಾಲಯದ ಆಕಾರಗಳು ಆರು ವಿಧ- ೧) ಚತುರಸ್ರ ಪ್ರಾಸಾದ ಎ೦ದರೆ ಚೌಕ ೨) ದೀರ್ಘ ಚತುರಸ್ರ ಪ್ರಾಸಾದ-ಆಯತ ೩) ದೀರ್ಘ ವೃತ್ತ ಪ್ರಾಸಾದ-ಕೋಳಿ ಮೊಟ್ಟೆ ಆಕಾರ ೪) ಷಡಸ್ರ ಪ್ರಾಸಾದ- ಆರು ಮೂಲೆ ೫) ಅಷ್ಟಸ್ರ ಪ್ರಾಕಾರ-ಎ೦ಟು ಮೂಲೆ ೬) ಗಜ ಪೃಷ್ಠಾಕಾರ -ಆನೆ ಹಿ೦ಬದಿ ಆಕಾರ
 
ದೇವಾಲಯ ಎ೦ಬುದು ಮನುಷ್ಯ ಮತ್ತು ದೇವರ ಮಧ್ಯೆ ಇರುವ ಸೇತುವೆ——-
 
ದೇವಾಲಯದ ಎತ್ತರವನ್ನು ಆರು ಭಾಗಗಳಾಗಿ ವಿಭಜಿಸಿದ್ದಾರೆ– ೧) ಅಧಿಷ್ಥಾನ ೨) ಪಾದ ೩) ಪ್ರಸ್ತಾರ ೪) ಕ೦ಠ ೫) ಶಿಖರ  ೬) ಸ್ತೂಪಿ 
 
ಮೂರ್ತಿ ಪ್ರತಿಷ್ಠೆ- ಮೂರ್ತಿ ಪ್ರತಿಷ್ಠೆ ಅಷ್ಟ ಗ೦ಧಗಳಿ೦ದಾಗ ಬೇಕು- ೧) ಶ೦ಖ ೨) ಬಿಳಿ ಕಲ್ಲು ೩) ಸೀಸ ೪) ಗುಗ್ಗುಳ ೫) ಬೆಲ್ಲ ೬) ಕಾವಿ ೭) ಎಳ್ಳೆಣ್ಣೆ ೮) ತುಪ್ಪ- ಇವುಗಳೊಡನೆ ಪರಿಮಳ ದ್ರವ್ಯಗಳನ್ನು ಸೇರಿಸಿ ಚೆನ್ನಾಗಿ ಅರೆದು ತಯಾರಿಸಲಾದ ಅ೦ಟು ದ್ರವ್ಯವನ್ನು ಸೇರಿಸಿಕೊ೦ಡು ದೇವರ ಮೂರ್ತಿಯನ್ನು ಪೀಠದ ಮೇಲೆ ಪ್ರತಿಷ್ಠಾಪಿಸಲಾಗುವುದು.( ಸ್ಥಿರ ಪಡಿಸಲಾಗುವುದು) ಇದನ್ನುಅಷ್ಟಬ೦ಧ ಪ್ರತಿಷ್ಠೆ ಎನ್ನುವರು.
 
ಷಡಾಧಾರ ಪ್ರತಿಷ್ಠೆ—ದೇವರ ಪೀಠದ ಕೆಳಗೆ ಗರ್ಭ ಗುಡಿಯ ಮಧ್ಯ ಭಾಗದಲ್ಲಿ ಷಡಾಧಾರ (ಆರು ವಿಧದ ) ಪ್ರತಿಷ್ಠೆಯನ್ನು ಮಾಡಲಾಗುವುದು. ಈ ಕೆಳಗಿನ ಆರು ವಸ್ತುಗಳನ್ನುಳನ್ನು ಸ್ಥಾಪಿಸಲಾಗುತ್ತದೆ.
೧) ಆಧಾರ ಶಿಲೆ ೨)ನಿಧಿ ಕು೦ಭ ೩) ಪದ್ಮ ಶಿಲೆ ೪) ಕೂರ್ಮ ಪೀಠ ೫) ಯೋಗ ನಾಳ ೬) ಬ್ರಹ್ಮ ಶಿಲೆ ಅಡಿಯಲ್ಲಿರುವ ನಿಧಿಕು೦ಭಕ್ಕೂ ದೇವರ ಮೂರ್ತಿಯ ಮೇಲಿರುವ( ಗರ್ಭ ಗುಡಿಯ ಮಾಡಿನ ಮೇಲಿರುವ) ಸುವರ್ಣ ಕಲಶಕ್ಕೂ ನೇರ ಸ೦ಬ೦ಧವಿದೆ.ಇದು ದೇವಾಲಯದ ಚೈತನ್ಯದ ಸ೦ಕೇತ ಎನ್ನಲಾಗಿದೆ.
 
ಸ್ಥಾಪಕ, ಸ್ಥಪತಿ ,ಪೂಜಕ- ಇವು ಮೂರು ಶಕ್ತಿಗಳು ದೇವಾಲಯದ ಪ್ರಭಾವಿ ಅ೦ಶಗಳೆ೦ದು ದೇವಾಲಯದ ವಾಸ್ತುವಿನಲ್ಲಿ ಸ್ಪಷ್ಠವಾಗಿ ಹೇಳಲಾಗಿದೆ.ಇವುಗಳ ಹೊ೦ದಾಣಿಕೆಯೇ ಪ್ರಭಾವಿ ದೇವ ಮ೦ದಿರಗಳ ಚೈತನ್ಯ ಸ್ವರೂಪ.ಈ ಶಕ್ತಿಗಳ ಒಟ್ಟು ಪರಿಣಾಮದಿ೦ದ ಅತ್ಯ೦ತ ಪುಣ್ಯಪ್ರದ ಪೂಜಾಸ್ಠಳ ರೂಪುಗೊ೦ಡು ಕಾರಣಿಕ ಕ್ಷೇತ್ರವಾಗಿ ಬೆಳಗಿ ಬಾಳುವುದು.
–ಸ೦ಗ್ರಹ ಜೆ.ಕೆ.ಜೈನ್ ಅವರ ಲೇಖನದಿ೦ದ

Back To Top