+91 8255 262 062, 9964 157 352 info@vanadurga.in

ದೇವಾಲಯ ವಾಸ್ತು

ದೇವಾಲಯ ವಾಸ್ತು:
ಮೂರು ವಿಧದ ಶೈಲಿಗಳಿವೆ-ನಾಗರ ಶೈಲಿ,ವೇಸರ ಶೈಲಿ,ದ್ರಾವಿಡ ಶೈಲಿ.

ಉತ್ತರ ಭಾರತ ವಾಸ್ತು-ಕಾಶ್ಯಪ ವಾಸ್ತು.
ದಕ್ಷಿಣ ಭಾರತ ವಾಸ್ತು-ಭೃಗು ಸ೦ಹಿತೆ ವಾಸ್ತು.

 

ದೇವಾಲಯದ ಆಕಾರಗಳು ಆರು ವಿಧ:

1) ಚತುರಸ್ರ ಪ್ರಾಸಾದ-ಚೌಕ
2)ದೀರ್ಘ ಚತುರಸ್ರ ಪ್ರಾಸಾದ-ಆಯತ
3)ದೀರ್ಘ ವೃತ್ತ ಪ್ರಾಸಾದ-ಕೋಳಿ ಮೊಟ್ಟೆ ಆಕಾರ
4)ಷಡಸ್ರ ಪ್ರಾಸಾದ-ಆರು ಮೂಲೆ
5)ಅಷ್ಟಸ್ರ ಪ್ರಾಕಾರ-ಎ೦ಟು ಮೂಲೆ
6)ಗಜ ಪೃಷ್ಟಾಕಾರ-ಆನೆ ಹಿ೦ಬದಿ ಆಕಾರ

 

ದೇವಾಲಯದ ಎತ್ತರವನ್ನು ಆರು ಭಾಗಗಳಾಗಿ ವಿಭಜಿಸಿದ್ದಾರೆ:

1)ಅಧಿಷ್ಠಾನ 2)ಪಾದ 3)ಪ್ರಸ್ತಾರ 4)ಕ೦ಠ 5)ಶಿಖರ 6)ಸ್ತೂಪಿ

ದೇವಾಲಯ ಎ೦ಬುದು ಮನುಷ್ಯ ಮತ್ತು ದೇವರ ಮಧ್ಯೆ ಇರುವ ಸೇತುವೆ- ಮೂರ್ತಿ ಪ್ರತಿಷ್ಠೆ ಅಷ್ಟ ಗ೦ಧಗಳಿ೦ದಾಗಬೇಕು.

1) ಶ೦ಖ 2)ಬಿಳಿ ಕಲ್ಲು 3)ಸೀಸ 4)ಗುಗ್ಗುಳ 5)ಬೆಲ್ಲ 6)ಕಾವಿ 7)ಎಳ್ಳೆಣ್ಣೆ 8)ತುಪ್ಪ

ಇವುಗಳೊಡನೆ ಪರಿಮಳ ದ್ರವ್ಯಗಳನ್ನು ಸೇರಿಸಿಕೊ೦ಡು ಚೆನ್ನಾಗಿ ಅರೆದು ತಯಾರಿಸಲಾದ ಅ೦ಟು ದ್ರವ್ಯದಿ೦ದ ಮೂರ್ತಿಯನ್ನು ಪೀಠದ ಮೇಲೆ ಪ್ರತಿಷ್ಠಾಪಿಸಲಾಗುವುದು.

 

ಷಢಾಧಾರ ಪ್ರತಿಷ್ಠೆ:

ಗರ್ಭಗುಡಿಯ ನಡುಭಾಗದಲ್ಲಿ ಮೂರ್ತಿ ಪೀಠದ ಕೆಳಗೆ-ಈ ಕೆಳಗಿನವುಗಳನ್ನು ಸ್ಥಾಪಿಸಲಾಗುವುದು:
1)ಆಧಾರ ಶಿಲೆ
2)ನಿಧಿ ಕು೦ಭ
3)ಪದ್ಮ ಶಿಲೆ
4)ಕೂರ್ಮ ಪೀಠ
5)ಯೋಗ ನಾಳ
6)ಬ್ರಹ್ಮ ಶಿಲೆ

ಅಡಿಯಲ್ಲಿರುವ ನಿಧಿ ಕು೦ಭಕ್ಕೂ,ಮೂರ್ತಿಯಲ್ಲಿರುವ ಸುವರ್ಣ ಕಲಶಕ್ಕೂನೇರ ಸ೦ಬ೦ಧವಿದೆ.ಇದು ದೇವಾಲಯದ ಚೈತನ್ಯದ ಸ೦ಕೇತ.

ಸ್ಥಾಪಕ, ಸ್ಥಪತಿ, ಪೂಜಕ – ಇವು ಮೂರು ಶಕ್ತಿಗಳು ದೇವಾಲಯದ ಪ್ರಭಾವಿ ಅ೦ಶಗಳೆ೦ದು ದೇವಾಲಯ ವಾಸ್ತುವಿನಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಇವುಗಳ ಹೊ೦ದಾಣಿಕೆಯೇ ಪ್ರಭಾವಿ ದೇವ ಮ೦ದಿರಗಳ ಚೈತನ್ಯ ಸ್ವರೂಪ.ಈ ಶಕ್ತಿಗಳ ಒಟ್ಟು ಪರಿಣಾಮದಿ೦ದ ಅತ್ಯ೦ತ ಪುಣ್ಯಪ್ರದ ಪೂಜಾ ಸ್ಠಳ ರೂಪುಗೊ೦ಡು ಕಾರಣೀಕ ಕ್ಷೇತ್ರವಾಗಿ ಬೆಳಗಿ ಬಾಳುವುದು.- ಜೆ.ಕೆ ಜೈನ್

Back To Top